ಇದು ಫೇಕ್ ನ್ಯೂಸ್ ಅಲ್ಲ: 2017 ರ ಅತ್ಯಂತ ಹೆಚ್ಚು ಬಳಕೆಯಾದ ಪದ ಯಾವುದು ಗೊತ್ತೇ ?

Update: 2017-11-03 04:34 GMT

ಲಂಡನ್, ನ. 2: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಚುರಪಡಿಸಿದ ‘ಫೇಕ್ ನ್ಯೂಸ್’ನ್ನು ಕಾಲಿನ್ಸ್ ಡಿಕ್ಶನರಿ ತನ್ನ ವರ್ಷದ ಪದವನ್ನಾಗಿ ಆರಿಸಿದೆ. ಕಳೆದ ವರ್ಷ ಈ ಪದ ‘ಸರ್ವವ್ಯಾಪಿ’ಯಾಗಿತ್ತು ಎಂಬುದಾಗಿ ಡಿಕ್ಶನರಿಯ ಸಂಶೋಧಕರು ಹೇಳಿದ್ದಾರೆ.

2016ರ ಬಳಿಕ ‘ಫೇಕ್ ನ್ಯೂಸ್’ ಬಳಕೆ 365 ಶೇಕಡದಷ್ಟು ಹೆಚ್ಚಿದೆ. ಇದರ ಮೂಲ ಅಮೆರಿಕದ ಟೆಲಿವಿಶನ್‌ನಲ್ಲಿದೆ ಎಂದು ಡಿಕ್ಶನರಿ ಭಾವಿಸಿದೆ. ‘ವರದಿಗಾರಿಕೆಯ ಹೆಸರಿನಲ್ಲಿ ಸುಳ್ಳು, ಹೆಚ್ಚಿನ ಸಂದರ್ಭಗಳಲ್ಲಿ ರೋಮಾಂಚಕ ಮಾಹಿತಿಯನ್ನು ಹರಡುವುದನ್ನು’ ಬಣ್ಣಿಸಲು ಈ ಪದವನ್ನು ಬಳಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News