ಪ್ರಿಯಾಮಣಿ 'ಪ್ರಕಾರ'

Update: 2017-11-03 13:55 GMT

ಬಹುಭಾಷಾ ನಟಿ ಪ್ರಿಯಾಮಣಿ ಕೂಡಾ ವಿವಾಹದ ಬಳಿಕ ತುಸು ಸಮಯ ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ಈಗ ಆಕೆ ತನ್ನ ಚಿತ್ರಬದುಕಿನ ಎರಡನೆ ಇನಿಂಗ್ಸ್ ಆರಂಭಿಸುತ್ತಿದ್ದಾರೆ. ಅದೂ ಸ್ಯಾಂಡಲ್‌ವುಡ್ ಚಿತ್ರದ ಮೂಲಕವೇ ಮತ್ತೆ ಮೇಕಪ್ ಹಚ್ಚಿದ್ದಾರೆ. ಕ್ರೈಮ್ ಥ್ರಿಲ್ಲರ್ ಕಥೆಯುಳ್ಳ ಈ ಚಿತ್ರಕ್ಕೆ ‘ನನ್ನ ಪ್ರಕಾರ’ ಎಂದು ಹೆಸರಿಡಲಾಗಿದೆ. ಬಹುಭಾಷಾ ನಟ ಕಿಶೋರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಬೆಂಗಳೂರಿನ ಉದ್ಯಮಿ ಮುಸ್ತಾಫರಾಜ್‌ರನ್ನು ವಿವಾಹವಾದ ಬಳಿಕ ಪ್ರಿಯಾಮಣಿ ಚಿತ್ರರಂಗದ ಬದುಕಿಗೆ ವಿದಾಯ ಹೇಳಲಿದ್ದಾರೆಂಬ ವದಂತಿಗಳು ಕೇಳಿಬರುತ್ತಿದ್ದವು. ಆದರೆ ‘ನನ್ನ ಪ್ರಕಾರ’ದ ಮೂಲಕ ಪ್ರಿಯಾಮಣಿ ಈ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ನವ ನಿರ್ದೇಶಕ ವಿನಯ್ ಬಾಲಾಜಿ ನಿರ್ದೇಶನದ ‘ನನ್ನ ಪ್ರಕಾರ’ದ ಉಳಿದ ತಾರಾಬಳಗದ ಆಯ್ಕೆ ಭರದಿಂದ ನಡೆಯುತ್ತಿದ್ದು, ಸದ್ಯದಲ್ಲೇ ಶೂಟಿಂಗ್‌ಗೆ ಅಣಿಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News