ವಿಮಾನದಲ್ಲಿ ಸಿಂಧುಗೆ ಕಿರುಕುಳ

Update: 2017-11-04 09:03 GMT

ಹೊಸದಿಲ್ಲಿ, ನ.3: ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಜಯಿಸಿದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರು   ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ವಿಮಾನದ ಸಿಬ್ಬಂದಿಯೊಬ್ಬರು ಅಸಭ್ಯವಾಗಿ ವರ್ತಿಸಿದ ಘಟನೆ ಬೆಳಕಿಗೆ ಬಂದಿದೆ.

ಸಿಂಧು ಅವರು ಶನಿವಾರ ಇಂಡಿಗೋ ವಿಮಾನ 6ಇ 608 ರಲ್ಲಿ ಮುಂಬೈ ಪ್ರಯಾಣಿಸುತ್ತಿದ್ದಾಗ ಗ್ರೌಂಡ್ ಸ್ಟಾಪ್ ಅಜಿತೇಶ್ ಕಿರುಕುಳ ನೀಡಿರುವುದಾಗಿ ಟ್ವಿಟರ್ ನಲ್ಲಿ ಹೇಳಿದ್ದಾರೆ  ಆಗ ಗಗನಸಖಿ ಅಶಿಮಾ ಅವರು ಪ್ರಯಾಣಿಕರೊಂದಿಗೆ  ಸರಿಯಾಗಿ ನಡೆದುಕೊಳ್ಳುವಂತೆ ಅಜಿತೇಶ್ ಗೆ ಸೂಚಿಸಿರೆಂದು ಸಿಂಧು ಹೇಳಿದ್ದಾರೆ.

ಹಿಂದೆ ಕ್ರಿಕೆಟ್ ಆಟಗಾರರಾದ ಸಚಿನ್ ತೆಂಡುಲ್ಕರ್ ಮತ್ತು  ಹರ್ಭಜನ್ ಸಿಂಗ್ ಅವರು ಬ್ರಿಟೀಷ್ ಏರ್ ವೇಸ್ ಮತ್ತು ಜೆಟ್ ಏರ್ ವೇಸ್  ವಿಮಾನದ ವ್ಯವಸ್ಥೆಯ ಬಗ್ಗೆ ಟೀಕಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News