ಎನ್ ಟಿಪಿಸಿ ಬಾಯ್ಲರ್ ಸ್ಪೋಟ : ಮತ್ತೆ 6 ಮಂದಿ ಆಸ್ಪತ್ರೆಗೆ ದಾಖಲು

Update: 2017-11-04 16:12 GMT

ಹೊಸದಿಲ್ಲಿ, ನ. 4: ಉತ್ತರಪ್ರದೇಶದ ರಾಯಬರೇಲಿಯ ಉಂಚಾಹಾರ್‌ನಲ್ಲಿ ಎನ್‌ಟಿಪಿಸಿ ಬಾಯ್ಲರ್ ಸ್ಫೋಟದಿಂದ ಮತ್ತೆ 6 ಮಂದಿ ಗಾಯಗೊಂಡಿದ್ದು, ಅವರನ್ನು ಹೊಸದಿಲ್ಲಿಗೆ ಕರೆದೊಯ್ದು ಅನಂತರ ಎಐಐಎಂಎಸ್‌ನಲ್ಲಿ ದಾಖಲಿಸಲಾಗಿದೆ.

ಈ 6 ಮಂದಿಗೂ ಮುಖಕ್ಕೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿವೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

 ಗಾಯಗೊಂಡ ಕಾರ್ಮಿಕರನ್ನು ಏರ್‌ಬಸ್ ಮೂಲಕ ದಿಲ್ಲಿಗೆ ಕರೆದೊಯ್ದು ರಾತ್ರಿ ಸುಮಾರು 8.30ರ ಹೊತ್ತಿಗೆ ಎಐಐಎಂಎಸ್‌ನಲ್ಲಿ ದಾಖಲಿಸಲಾಯಿತು. ಕಾರ್ಮಿಕರ ಗಂಭೀರ ಸ್ಥಿತಿ ಪರಿಗಣಿಸಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಐಐಎಂಎಸ್ ತುರ್ತು ನಿಗಾ ಘಟಕದ ವರೆಗೆ ಗ್ರೀನ್ ಕಾರಿಡರ್ ರೂಪಿಸಲಾಗಿತ್ತು.

ಎಲ್ಲ 6 ಮಂದಿಯನ್ನು ಎಐಐಎಂಎಸ್‌ನ ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿದೆ. ಓರ್ವನಿಗೆ ಶೇ. 60 ಹಾಗೂ ಇತರರಿಗೆ ಶೇ. 25-50 ಸುಟ್ಟ ಗಾಯಗಳಾಗಿವೆ. ಹೆಚ್ಚಿನವರಿಗೆ ಮುಖಕ್ಕೆ ಸುಟ್ಟ ಗಾಯಗಳಾಗಿವೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News