ಡಬಲ್ ಸೆಂಚುರಿ ಬಾರಿಸಿದ ಮುಂಬೈಯ ಹುಡುಗಿ

Update: 2017-11-06 07:45 GMT

ಮುಂಬೈ, ನ.5: ಮುಂಬೈನ ಜೆಮಿಮಾ ರೋಡ್ರಿಗಸ್ ಅವರು ಸೌರಾಷ್ಟ್ರ ವಿರುದ್ಧದ ವನಿತೆಯರ ಅಂಡರ್ -19 ಏಕದಿನ ಕ್ರಿಕೆಟ್ ಪಂದ್ಯದಲ್ಲಿ ದ್ವಿಶತಕ ದಾಖಲಿಸಿದ್ದಾರೆ.

ಔರಾಂಗಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ 16ರ ಹರೆಯದ ಜೆಮಿಮಾ ಅವರು 163 ಎಸೆತಗಳಲ್ಲಿ 202 ರನ್ ಸಿಡಿಸಿದರು. ಜೆಮಿಮಾ ಅವರ ಶತಕದ ನೆರವಿನಲ್ಲಿ ಮುಂಬೈ ನಿಗದಿತ 50 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 347 ರನ್ ಗಳಿಸಿದೆ. ಜೆಮಿಮಾ ಅವರು ಅಂಡರ್-19 ತಂಡಕ್ಕೆ 13ರ ಹರೆಯದಲ್ಲೇ ಪಾದಾರ್ಪಣೆ ಮಾಡಿದ್ದರು. ಪ್ರಸ್ತುತ ನಡೆಯುತ್ತಿರುವ ಟೂರ್ನಮೆಂಟ್‌ನಲ್ಲಿ ಜೆಮಿಮಾ 2 ಶತಕ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News