×
Ad

ಬಾಂಗ್ಲಾ: ಬ್ಲಾಗರ್ ಹತ್ಯೆ ನಡೆಸಿದ ಉಗ್ರನ ಬಂಧನ

Update: 2017-11-06 22:06 IST

ಢಾಕಾ, ನ. 6: 2015ರಲ್ಲಿ ಧಾರ್ಮಿಕ ತೀವ್ರವಾದವನ್ನು ಟೀಕಿಸಿದ ಅಮೆರಿಕದ ಬ್ಲಾಗರ್ ಒಬ್ಬರ ಹತ್ಯೆ ನಡೆಸಿದ ಆರೋಪದಲ್ಲಿ ಭಯೋತ್ಪಾದಕನೊಬ್ಬನನ್ನು ಬಂಧಿಸಲಾಗಿದೆ ಎಂದು ಬಾಂಗ್ಲಾದೇಶದ ಭಯೋತ್ಪಾದನೆ ನಿಗ್ರಹ ಪೊಲೀಸರು ಸೋಮವಾರ ಹೇಳಿದ್ದಾರೆ.

ಬಂಧಿತನನ್ನು ಅನ್ಸಾರುಲ್ಲಾ ಬಾಂಗ್ಲಾ ಟೀಮ್ ಎಂಬ ಭಯೋತ್ಪಾದಕ ಗುಂಪಿನ ಸದಸ್ಯ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಆತನು ಬಾಂಗ್ಲಾದೇಶ ಮೂಲದ ಅಮೆರಿಕ ಪ್ರಜೆ, ಲೇಖಕ ಅವಿಜಿತ್ ರಾಯ್ ಎಂಬವರನ್ನು ಹತ್ಯೆ ಮಾಡಿದ್ದನು.

ಕೊರಿಯ ಪರ್ಯಾಯ ದ್ವೀಪದಲ್ಲಿ ಶಾಂತಿ ಬೇಕೆಂದು ಆಗ್ರಹಿಸಿ ದಕ್ಷಿಣ ಕೊರಿಯದ ಜನರು ರಾಜಧಾನಿ ಸಿಯೋಲ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಸಮೀಪ ಸೋಮವಾರ ಮೆರವಣಿಗೆ ನಡೆಸಿದರು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರದಿಂದ ಎರಡು ದಿನಗಳ ಕಾಲ ದಕ್ಷಿಣ ಕೊರಿಯದಲ್ಲಿ ಪ್ರವಾಸ ಕೈಗೊಳ್ಳುತ್ತಾರೆ.

 ಟೆಕ್ಸಾಸ್‌ನಲ್ಲಿ ರವಿವಾರ ನಡೆದ ಗುಂಡು ಹಾರಾಟ ಪ್ರಕರಣ ವ್ಯಕ್ತಿಯೊಬ್ಬನ ಮಾನಸಿಕ ಆರೋಗ್ಯ ಸಮಸ್ಯೆಯಿಂದ ನಡೆದಿದೆ, ಇದು ಬಂದೂಕಿನ ಸಮಸ್ಯೆಯಲ್ಲ.

ಡೊನಾಲ್ಡ್ ಟ್ರಂಪ್, ಅಮೆರಿಕದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News