ಉಪನಾಯಕ ಹುದ್ದೆಯ ಮೇಲೆ ಆ್ಯಂಡರ್ಸನ್ ಕಣ್ಣು

Update: 2017-11-06 18:38 GMT

ಮೆಲ್ಬೋರ್ನ್, ನ.6: ಮುಂಬರುವ ಆ್ಯಶಸ್ ಸರಣಿಗೆ ಇಂಗ್ಲೆಂಡ್ ತಂಡದ ಉಪನಾಯಕನ ಹುದ್ದೆಯನ್ನು ತಮಗೆ ವಹಿಸಿಕೊಟ್ಟಲ್ಲಿ ತಾನು ಆ ಹುದ್ದೆಯನ್ನು ಚೆನ್ನಾಗಿ ನಿಭಾಯಿಸಲು ಸಿದ್ಧ್ದ ಎಂದು ಖ್ಯಾತ ವೇಗಿ ಜೇಮ್ಸ್ ಆ್ಯಂಡರ್ಸನ್ ತಿಳಿಸಿದರು.

ತಂಡದ ಉಪನಾಯಕನಾಗಿದ್ದ ಬೆನ್ ಸ್ಟೋಕ್ಸ್ ಅವರು ವೆಸ್ಟ್‌ಇಂಡೀಸ್ ವಿರುದ್ಧದ ಏಕದಿನ ಸರಣಿಯ ವೇಳೆ ರಾತ್ರಿ ಪಾನಮತ್ತರಾಗಿ ಬೀದಿ ಕಾಳಗದಲ್ಲಿ ಭಾಗಿಯಾಗಿದ್ದ್ದ ಆರೋಪದಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದರು.ಇದರಿಂದಾಗಿ ಬೆನ್ ಸ್ಟೋಕ್ಸ್ ತಂಡದಲ್ಲಿ ಅವಕಾಶ ಕಳೆದುಕೊಂಡಿದ್ದಾರೆ.

ಬೆನ್ ಸ್ಟೋಕ್ಸ್ ತಂಡದಿಂದ ಹೊರದಬ್ಬಲ್ಪಟ್ಟ ಹಿನ್ನೆಲೆಯಲ್ಲಿ ಇಂಗ್ಲೆಂಡ್ ತಂಡಕ್ಕೆ ಹೊಸ ಉಪನಾಯಕನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಆ್ಯಂಡರ್ಸನ್ ತೆರವಾಗಿರುವ ಸ್ಥಾನವನ್ನು ವಹಿಸಿಕೊಳ್ಳಲು ಆಸಕ್ತಿ ವಹಿಸಿದ್ದಾರೆ.

35ರ ಆ್ಯಂಡರ್ಸನ್ ಅವರು ಇಂಗ್ಲೆಂಡ್‌ನ ಪರ ಟೆಸ್ಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದಿದ್ದಾರೆ. ಅವರು 129 ಟೆಸ್ಟ್‌ಗಳಲ್ಲಿ 506 ವಿಕೆಟ್ ಪಡೆದಿದ್ದಾರೆ.

ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯ ನ.23ರಂದು ಬ್ರಿಸ್ಬೇನ್‌ನಲ್ಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News