ನಗದು ನಿಷೇಧದ ತೊಂದರೆ ತಾತ್ಕಾಲಿಕ: ನೀತಿ ಆಯೋಗದ ಸದಸ್ಯ ವಿವೇಕ್ ದೇಬ್ರಾಯ್

Update: 2017-11-09 17:18 GMT

ಹೊಸದಿಲ್ಲಿ, ನ. 9: ನಗದು ನಿಷೇಧದಿಂದ ಪ್ರಗತಿ ಮೇಲೆ ತಾತ್ಕಾಲಿಕ ತೊಂದರೆ ಉಂಟಾಗಿದೆ ಎಂದು ಹೇಳಿರುವ ನೀತಿ ಆಯೋಗದ ಸದಸ್ಯ ವಿವೇಕ್ ದೇಬ್ರಾಯ್, ಆರ್ಥಿಕತೆ ನಿಧಾನಗತಿಯಲ್ಲಿ ಬೆಳವಣಿಗೆಯಾಗುತ್ತಿದೆ ಎಂದಿದ್ದಾರೆ.

ಕೆಟ್ಟ ಕಾಲ ಮುಗಿದಿದೆ. ಈಗ ಆರ್ಥಿಕತೆಗೆ ಬೆಳವಣಿಗೆಯಾಗುತ್ತಿ ರುವುದು ಕಂಡುಬರುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ನೀತಿಯ ಸಲಹೆಗಾರರಾಗಿರುವ ದೇಬ್ರಾಯ್ ಹೇಳಿದ್ದಾರೆ.

ನಗದು ನಿಷೇಧವನ್ನು ಲಾಭದ ಲೆಕ್ಕಾಚಾರದ ಮೂಲಕ ಕಾಣಬಾರದು. ಈ ಕ್ರಮದಿಂದ ಸಾಂಸ್ಥಿಕ ಶುದ್ಧೀಕರಣವಾಗಿದೆ ಎಂದು ಅವರು ಹೇಳಿದರು.

ಹೌದು ಆರ್ಥಿಕತೆಯಲ್ಲಿ ಇಳಿಕೆಯಾಗಿದೆ. ಆದರೆ, ಆರ್ಥಿಕತೆ ಮತ್ತೆ ಮೇಲೇರಲಿದೆ ಎಂದು ಹೇಳಿದ ಅವರು, ನಗದು ನಿಷೇಧವನ್ನು ಆರ್ಥಿಕ ಆಯಾಮದಿಂದ ಮಾತ್ರ ನೋಡಬಾರದು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News