ಇಳಿದ ಜಿಎಸ್‌ಟಿ,ಏರಿದ ಶೇರು ಮಾರುಕಟ್ಟೆ

Update: 2017-11-10 12:40 GMT

ಮುಂಬೈ,ನ.10: ಹಲವಾರು ದಿನಬಳಕೆ ಸಾಮಗ್ರಿಗಳ ತೆರಿಗೆ ದರವನ್ನು ಶೇ.28ರಿಂದ ಶೇ.18ಕ್ಕೆ ಇಳಿಸಲು ಜಿಎಸ್‌ಟಿ ಮಂಡಳಿಯು ಶುಕ್ರವಾರ ಕೈಗೊಂಡ ನಿರ್ಧಾರವನ್ನು ಶೇರುಪೇಟೆಯು ಸ್ವಾಗತಿಸಿದೆ. ಬೆಳಿಗ್ಗೆ ಶೇರುಪೇಟೆಯು ಆರಂಭಗೊಂಡ ಬಳಿಕ ಏರಿಳಿತದಲ್ಲಿಯೇ ಇದ್ದ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಮಧ್ಯಾಹ್ನ ತೆರಿಗೆ ಕಡಿತದ ಸುದ್ದಿ ಹೊರಬರುತ್ತಿದ್ದಂತೆ ಹೂಡಿಕೆದಾರರು ಖರೀದಿಗೆ ಮುಗಿಬಿದ್ದಿದ್ದರಿಂದ ಏರಿಕೆಯೊಂದಿಗೆ ದಿನದ ಮುಕ್ತಾಯ ಕಂಡವು.

ಸೆನ್ಸೆಕ್ಸ್ 63.63(ಶೇ.0.19) ಅಂಶಗಳ ಗಳಿಕೆಯೊಂದಿಗೆ 33,314.56ಕ್ಕೆ ದಿನದ ವಹಿವಾಟು ಮುಗಿಸಿದರೆ, ನಿಫ್ಟಿ 12.80(ಶೇ.0.12) ಅಂಶಗಳ ಗಳಿಕೆಯೊಂದಿಗೆ 10,321.75ರಲ್ಲಿ ಕೊನೆಗೊಂಡಿತು.

ಆದರೆ ಶುಕ್ರವಾರ ವಾರದ ಕೊನೆಯ ವಹಿವಾಟು ದಿನವಾಗಿದ್ದು, ಕಳೆದ ಶುಕ್ರವಾರದ ಮುಕ್ತಾಯಕ್ಕೆ ಹೋಲಿಸಿದರೆ ಈ ವಾರಾಂತ್ಯದಲ್ಲಿ ಸೆನ್ಸೆಕ್ಸ್ 371 ಅಂಶಗಳ(ಶೇ.1.10) ಮತ್ತು ನಿಫ್ಟಿ 130.75(ಶೇ.1.25) ಅಂಶಗಳ ಕುಸಿತವನ್ನು ದಾಖಲಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News