ಭಾರತ, ಮೋದಿಯನ್ನು ಶ್ಲಾಘಿಸಿದ ಟ್ರಂಪ್

Update: 2017-11-10 16:50 GMT

ಡನಂಗ್ (ವಿಯೆಟ್ನಾಂ), ನ. 10:ಏಶ್ಯ-ಪೆಸಿಫಿಕ್ ಆರ್ಥಿಕ ಸಹಕಾರ (ಎಪಿಇಸಿ)ದ ಸಮ್ಮೇಳನದ ನೇಪಥ್ಯದಲ್ಲಿ ಸಿಇಒಗಳ ಸಮ್ಮೇಳನದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಭಾರತದ ಯಶಸ್ಸಿನ ಕತೆಯನ್ನು ಶ್ಲಾಘಿಸಿದರು.

ಅವರಿ ಏಶ್ಯ-ಪೆಸಿಫಿಕ್ ಆರ್ಥಿಕ ಸಹಕಾರ ಸಮ್ಮೇಳನದಲ್ಲಿ ಮಾತನಾಡುತ್ತಿದ್ದರೂ, ಪದೇ ಪದೇ ‘ಇಂಡೋ-ಪೆಸಿಫಿಕ್’ ಎಂಬುದಾಗಿ ಹೇಳಿದರು. ಇದು ಈ ವಲಯದಲ್ಲಿನ ಅಮೆರಿಕದ ಆದ್ಯತೆಗಳಲ್ಲಿನ ಬದಲಾವಣೆಯನ್ನು ತೋರಿಸುವುದಕ್ಕಾಗಿ ಟ್ರಂಪ್ ಆಡಳಿತವೇ ಹುಟ್ಟು ಹಾಕಿದ ಪದವಾಗಿದೆ.

‘‘ಭಾರತ ತನ್ನ ಆರ್ಥಿಕತೆಯನ್ನು ಜಗತ್ತಿಗೆ ತೆರೆದಂದಿನಿಂದ ಅದು ಅಮೋಘ ಬೆಳವಣಿಗೆಯನ್ನು ದಾಖಲಿಸಿದೆ ಹಾಗೂ ಅದರ ಮಧ್ಯಮ ವರ್ಗಕ್ಕೆ ಅವಕಾಶಗಳ ಹೊಸ ಜಗತ್ತು ತೆರೆದುಕೊಂಡಿದೆ’’ ಎಂದರು.

‘‘ಆ ಬೃಹತ್ ದೇಶ ಮತ್ತು ಅದರ ಜನರನ್ನು ಒಂದಾಗಿಸಲು ಪ್ರಧಾನಿ ನರೇಂದ್ರ ಮೋದಿ ಕೆಲಸ ಮಾಡುತ್ತಿದ್ದಾರೆ ಹಾಗೂ ಆ ಕೆಲಸವನ್ನು ಅವರು ಅತ್ಯಂತ ಯಶಸ್ವಿಯಾಗಿ ಮಾಡುತ್ತಿದ್ದಾರೆ’’ ಎಂದು ಟ್ರಂಪ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News