ವೀಲ್‌ ಚೇರ್ ತಳ್ಳಿದ ಇಂಡಿಗೋ ಸಿಬ್ಬಂದಿ: ಮಹಿಳೆಗೆ ಗಾಯ

Update: 2017-11-13 14:35 GMT

ಹೊಸದಿಲ್ಲಿ, ನ. 13: ಲಕ್ನೊ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಸಿಬ್ಬಂದಿ ವೀಲ್‌ ಚೇರ್ ತಳ್ಳಿದ ಪರಿಣಾಮ ಮಹಿಳಾ ಪ್ರಯಾಣಿಕರೋರ್ವರು ಬಿದ್ದು ಗಾಯಗೊಂಡ ಘಟನೆ ಶನಿವಾರ ನಡೆದಿದೆ. ಈ ಘಟನೆ ಭಾರತ ವಿಮಾನ ನಿಲ್ದಾಣ ಪ್ರಾಧಿಕಾರ ಇಂಡಿಗೊ ನಡುವೆ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದೆ.

ವಿಮಾನ ನಿಲ್ದಾಣದ ನೆಲದಲ್ಲಿ ಬಿರುಕು ಇದ್ದುದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಇಂಡಿಗೋ ಸಮಜಾಯಿಷಿ ನೀಡಿದೆ. ಆದರೆ, ಇದು ಇಂಡಿಗೋ ಸಿಬ್ಬಂದಿ ನಿರ್ಲಕ್ಷದಿಂದ ಸಂಭವಿಸಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹೇಳಿದೆ.

ಈ ಘಟನೆಯಲ್ಲಿ ಗಾಯಗೊಂಡಿರುವ ಮಹಿಳೆ ಊರ್ವಶಿ ಪರಿಖಾ ವಿರೇನ್ ಅವರಲ್ಲಿ ಇಂಡಿಗೊ ವಕ್ತಾರ ಸೋಮವಾರ ಕ್ಷಮೆ ಕೋರಿದ್ದಾರೆ.

   ಊರ್ವಶಿ ಅವರಿದ್ದ ವೀಲ್‌ ಚೇರ್ ಅನ್ನು ಇಂಡಿಗೊ ಸಿಬ್ಬಂದಿ ದೂಡಿದರು. ಈ ಸಂದರ್ಭ ವೀಲ್ ಚೇರ್ ನೆಲದಲ್ಲಿದ್ದ ಬಿರುಕಿನಲ್ಲಿ ಸಿಲುಕಿಕೊಂಡಿತು ಹಾಗೂ ಸಮತೋಲನ ತಪ್ಪಿ ಮಗುಚಿತು. ಇದರಿಂದ ಮಹಿಳೆ ಗಾಯಗೊಂಡರು. ಅವರನ್ನು ಕೂಡಲೇ ವೈದ್ಯರಲ್ಲಿಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು ಎಂದು ವಕ್ತಾರ ತಿಳಿಸಿದ್ದಾರೆ. ಇದೆಲ್ಲಾ ಸಂಭವಿಸಿರುವುದು ಇಂಡಿಗೋ ಸಿಬ್ಬಂದಿ ನಿರ್ಲಕ್ಷದಿಂದ. ಅವರು ತಪ್ಪಾದ ದಾರಿ ಆಯ್ಕೆ ಮಾಡಿದರು ಹಾಗೂ ನಿರ್ಲಕ್ಷದಿಂದ ನಿರ್ವಹಿಸಿದರು ಎಂದು ಭಾರತ ವಿಮಾನ ನಿಲ್ದಾಣ ಪ್ರಾಧಿಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News