ಹೊಸದಿಲ್ಲಿ: ಮಾಸ್ಕ್ ಧರಿಸಿಕೊಂಡು ಶಾಲೆಗೆ ತೆರಳಿದ ವಿದ್ಯಾರ್ಥಿಗಳು

Update: 2017-11-13 15:34 GMT

 ಹೊಸದಿಲ್ಲಿ, ನ. 13: ರಾಷ್ಟ್ರ ರಾಜಧಾನಿಯಲ್ಲಿ ವಿಷಕಾರಿ ಹೊಗೆ ವ್ಯಾಪಿಸುತ್ತಿರುವುದು ಸೋಮವಾರ ಕೂಡ ಮುಂದುವರಿದಿದೆ.

ಕನಿಷ್ಠ ಉಷ್ಣಾಂಶ 12.4 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದೆ. ಇದು ಈ ಋತುಮಾನದ ಸರಾಸರಿ ಉಷ್ಣಾಂಶಕ್ಕಿಂತ ಕಡಿಮೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಆರ್ದ್ರತೆ ಬೆಳಗ್ಗೆ 8.30ಕ್ಕೆ ಶೇ. 93 ದಾಖಲಾಗಿದೆ. ಮುಂಜಾನೆ 5.30ಕ್ಕೆ 500 ಮೀಟರ್ ವರೆಗೆ ಮಾತ್ರ ಕಾಣುತ್ತಿತ್ತು. ಇದು ಬೆಳಗ್ಗೆ 8.30ಕ್ಕೆ 400 ಮೀಟರ್‌ಗೆ ಇಳಿಕೆಯಾಯಿತು.

ಭಾರೀ ಹೊಗೆಯ ಕಾರಣಕ್ಕಾಗಿ ರವಿವಾರದ ವರೆಗೆ ಮುಚ್ಚಲಾಗಿದ್ದ ಶಾಲೆ ಸೋಮವಾರ ಪುನಾರಾರಂಭವಾದವು. ವಿದ್ಯಾರ್ಥಿಗಳು ಮಾಸ್ಕ್ ಧರಿಸಿಕೊಂಡು ಶಾಲೆಗೆ ಆಗಮಿಸಿದರು.

ಇತ್ತೀಚಿಗಿನ ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ ಮಂದಿರ್ ಮಾರ್ಗದಲ್ಲಿ 523, ಆನಂದ್ ವಿಹಾರ್‌ನಲ್ಲಿ 510, ಪಂಜಾಬ್ ಬಾಗ್‌ನಲ್ಲಿ 743, ಶಾದಿಪುರ್‌ನಲ್ಲಿ 420 ದಾಖಲಾಗಿದೆ. ವಾಯು ಗುಣಮಟ್ಟ ಸೂಚ್ಯಾಂಕದ ಪ್ರಕಾರ ಈ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಅಪಾಯಕಾರಿ ಮಟ್ಟದಲ್ಲಿದೆ.

69  ರೈಲುಗಳು ವಿಳಂಬ, 8 ರದ್ದು

ಕನಿಷ್ಠ 69 ರೈಲುಗಳು ವಿಳಂಬವಾಗಿ ಸಂಚರಿಸುತ್ತಿವೆ. 22 ರೈಲುಗಳ ಸಮಯ ಬದಲಾಯಿಸಲಾಗಿದೆ. 8 ರೈಲುಗಳನ್ನು ರದ್ದುಗೊಳಿಸಲಾಗಿದೆ. ಯಾವುದೇ ವಿಮಾನ ವಿಳಂಬವಾಗಿಲ್ಲ, ರದ್ದುಗೊಳಿಸಿಲ್ಲ ಎಂದು ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News