ಜತಿನ್ ದಾಸ್ ಪೈಂಟಿಂಗ್ ಕಳವು: ಏರ್ ಇಂಡಿಯಾ ಮಾಜಿ ಇಡಿ ವಿರುದ್ಧ ಎಫ್‌ಐಆರ್ ದಾಖಲು

Update: 2017-11-13 17:29 GMT

ಹೊಸದಿಲ್ಲಿ, ನ. 13: ಏರ್ ಇಂಡಿಯಾ ಸಂಗ್ರಹದಲ್ಲಿದ್ದ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಖ್ಯಾತ ಕಲಾವಿದ ಜತಿನ್ ದಾಸ್ ಅವರ ಪೈಟಿಂಗ್ ಅನ್ನು ಕಳವುಗೈದ ಆರೋಪದಲ್ಲಿ ಏರ್ ಇಂಡಿಯಾದ ಮಾಜಿ ಕಾರ್ಯಕಾರಿ ನಿರ್ದೇಶಕ ರೋಹಿತ್ ಜೈಡ್ಕಾ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2004-2009ರ ನಡುವೆ ರೋಹಿತ್ ಜೈಡ್ಕಾ ಹಾಗೂ ಇತರ ಅಪರಿಚಿತ ವ್ಯಕ್ತಿಗಳು ಪೈಂಟಿಂಗ್ ಅನ್ನು ಕಳವುಗೈದಿರುವುದು ಬೆಳಕಿಗ ಬಂದ ಬಳಿಕ ಏರ್ ಇಂಡಿಯಾ ಆಂತರಿಕ ವಿಚಾರಣೆಗೆ ನಡೆಸಿತ್ತು. ಪೈಂಟಿಂಗ್ ಕಳವಾದ ಸಂದರ್ಭ ಜೈಡ್ಕಾ ಏರ್ ಇಂಡಿಯಾದ ಜನರಲ್ ಮ್ಯಾನೇಜರ್ ಹಾಗೂ ಕಾರ್ಯಕಾರಿ ನಿರ್ದೇಶಕರಾಗಿದ್ದರು. ಏರ್ ಇಂಡಿಯಾ ನವೆಂಬರ್ 11ರಂದು ಪೊಲೀಸರನ್ನು ಸಂಪರ್ಕಿಸಿತು ಹಾಗೂ ಜೈಡ್ಕ ಹಾಗೂ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.

 ಫ್ಲೈಯಿಂಗ್ ಅಪ್ಸರಾ ಎಂಬ ಶೀರ್ಷಿಕೆಯ ಈ ತೈಲ ವರ್ಣಚಿತ್ರವನ್ನು 1991ರಲ್ಲಿ ಏರ್ ಇಂಡಿಯಾಕ್ಕೆ ತರಲಾಗಿತ್ತು. ಕಳೆದ ಜೂನ್‌ನಲ್ಲಿ ದಾಸ್ ತನ್ನ ತೈಲಚಿತ್ರ ಕಾಣೆಯಾಗಿದೆ ಹಾಗೂ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಕ್ಕಿಡಲಾಗಿದೆ ಎಂದು ಏರ್ ಇಂಡಿಯಾಕ್ಕೆ ಪತ್ರ ಬರೆದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಆಂತರಿಕ ತನಿಖೆ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News