ಕುಟುಂಬ ಭೇಟಿಗೆ ಗುರ್ಮೀತ್‌ ಸಿಂಗ್ ಗೆ ಹೆಚ್ಚುವರಿ ಸಮಯ: ಆರೋಪ

Update: 2017-11-14 16:11 GMT

ರೋಹ್ಟಕ್, ನ. 14: ರೋಹ್ಟಕ್ ಸುನರಿಯಾ ಜೈಲಿನ ಅಧಿಕಾರಿಗಳು ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್‌ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತರ ಕೈದಿಗಳಿಗೆ ಕುಟುಂಬದ ಸದಸ್ಯರನ್ನು ಭೇಟಿಯಾಗಲು 20 ನಿಮಿಷ ಕಾಲಾವಕಾಶ ನೀಡಿದರೆ, ಗುರ್ಮೀತ್‌ಗೆ ಕುಟುಂಬದ ಸದಸ್ಯರನ್ನು ಭೇಟಿಯಾಗಲು 2 ಗಂಟೆ ಕಾಲಾವಕಾಶ ನೀಡುತ್ತಾರೆ ಎಂದು ಇದೇ ಜೈಲಿನಿಂದ ಬಿಡುಗಡೆಯಾಗಿರುವ ಕೈದಿ ಆರೋಪಿಸಿದ್ದಾನೆ.

ಗುರ್ಮೀತ್‌ನನ್ನು ಬ್ಯಾರಕ್‌ನ ಒಳಗೆ ಇರಿಸಲಾಗಿದೆ. ಆತ ತರಕಾರಿಗಳನ್ನು ಬೆಳೆಸಿ ದಿನಕ್ಕೆ 20 ರೂಪಾಯಿ ಸಂಪಾದಿಸುತ್ತಾನೆ ಎಂಬ ವರದಿ ಸುಳ್ಳು. ಆತ ಯಾವುದೇ ಕೆಲಸ ಮಾಡುತ್ತಿಲ್ಲ. ನಾನಾಗಲಿ ಇತರ ಕೈದಿಗಳಾಗಲಿ ಜೈಲಿನಲ್ಲಿ ಗುರ್ಮೀತ್‌ನನ್ನು ನೋಡಿಲ್ಲ. ನಾವು ಗುರ್ಮೀತ್‌ನ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳಿಂದ ಮಾತ್ರ ತಿಳಿಯುತ್ತಿದ್ದೇವೆ ಎಂದು ಶುಕ್ರವಾರ ಜಾಮೀನು ಮೇಲೆ ಬಿಡುಗಡೆಗೊಂಡಿರುವ ಕೈದಿ ರಾಹುಲ್ ಜೈನ್ ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News