ತಪ್ಪೊಪ್ಪಿಕೊಳ್ಳಲು ಸಿಬಿಐ ಒತ್ತಾಯಿಸಿತು : ಆರೋಪಿ ಬಾಲಕ

Update: 2017-11-14 16:49 GMT

ಹೊಸದಿಲ್ಲಿ, ನ. 14: ರ್ಯಾನ್ ಇಂಟರ್‌ನ್ಯಾಶನಲ್ ಶಾಲೆಯ 2ನೆ ತರಗತಿ ವಿದ್ಯಾರ್ಥಿ ಪ್ರದ್ಯುಮ್ನ ಠಾಕೂರ್‌ನನ್ನು ಹತ್ಯೆಗೈದಿರುವುದಾಗಿ ತಪ್ಪೊಪ್ಪಿಕೊಳ್ಳುವಂತೆ ಸಿಬಿಐ ತನಗೆ ಒತ್ತಡ ಹೇರಿರುವುದಾಗಿ ಆರೋಪಿ 11ನೆ ತರಗತಿ ವಿದ್ಯಾರ್ಥಿ ಹೇಳಿದ್ದಾನೆ.

ಸಿಬಿಐ ತಂಡ, ಕಾನೂನು ಹಾಗೂ ಬಾಲ ನ್ಯಾಯಮಂಡಳಿ ನಿಯೋಜಿಸಿದ ಮಕ್ಕಳ ರಕ್ಷಣಾ ಘಟಕದ ಪರಿವೀಕ್ಷಣಾ ಅಧಿಕಾರಿ ಮುಂದೆ ತಪ್ಪೊಪ್ಪಿಕೊಳ್ಳುವಂತೆ ಸಿಬಿಐ ತನಿಖಾಧಿಕಾರಿಗಳು ತನಗೆ ಒತ್ತಡ ಹೇರಿದ್ದರು ಎಂದು ಆರೋಪಿ ಬಾಲಕ ಹೇಳಿದ್ದಾನೆ.

ತನಿಖಾಧಿಕಾರಿಗಳು ನನಗೆ ಥಳಿಸಿದರು ಹಾಗೂ ತಪ್ಪೊಪ್ಪಿಗೆಯನ್ನು ಅವರೇ ಬರೆದರು ಎಂದು ಬಾಲಕ ಹೇಳಿದ್ದಾನೆ. ಆದರೆ, ಈ ಆರೋಪವನ್ನು ಸಿಬಿಐ ವಕ್ತಾರ ನಿರಾಕರಿಸಿದ್ದಾರೆ.

ಆರೋಪಿ ಬಾಲಕನನ್ನು ಫರೀದಾಬಾದ್‌ನಲ್ಲಿ ಅವಲೋಕನ ಗೃಹಕ್ಕೆ ಕಳುಹಿಸಲಾಗಿದೆ. ನವೆಂಬರ್ 22ರಂದು ನಡೆಯುವ ಮುಂದಿನ ವಿಚಾರಣೆ ವರೆಗೆ ಆತನನ್ನು ಅಲ್ಲಿ ಇರಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News