ಈ ವಾರ ಸುಖೋಯ್ ಯುದ್ಧ ವಿಮಾನ-ಬ್ರಹ್ಮೋಸ್ ಸೂಪರ್‌ ಸಾನಿಕ್ ಕ್ರೂಸ್ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ

Update: 2017-11-14 17:02 GMT

ಹೊಸದಿಲ್ಲಿ, ನ. 14: ತನ್ನ ಶಸ್ತ್ರಾಸ್ತ್ರ ಬತ್ತಳಿಕೆಯಲ್ಲಿ ಸುಖೋಯ್ ಯುದ್ಧ ವಿಮಾನ ಹಾಗೂ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಸಂಯೋಜನೆ ಹೊಂದಲು ಭಾರತೀಯ ಸೇನಾ ಪಡೆ ಸಿದ್ಧತೆ ನಡೆಸುತ್ತಿದೆ.

  ಈ ವಾರ ಸುಖೋಯ್-30ಎಂಕೆಐ ಯುದ್ಧ ವಿಮಾನದಿಂದ ಸೂಪರ್ ಸೋನಿಕ್ ಕ್ರೂಸ್ ಕ್ಷಿಪಣಿ ಉಡಾಯಿಸುವ ಪರೀಕ್ಷಾರ್ಥ ಪ್ರಯೋಗ ನಡೆಯಲಿದೆ. ಈ ರೀತಿಯ ಪರೀಕ್ಷೆ ಮೊದಲ ಬಾರಿಗೆ ನಡೆಯುತ್ತಿದೆ.

ಈ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಯುದ್ಧ ವಿಮಾನದೊಂದಿಗೆ ಧ್ವನಿಯ ಮೂರು ಪಟ್ಟು ವೇಗದಲ್ಲಿ ಚಲಿಸಲಿದೆ ಹಾಗೂ ಇದರ ಕ್ರೂಸಿಂಗ್ ರೇಂಜ್ 3,200 ಕಿ.ಮೀ.ಗಳು. ಈ ಪರೀಕ್ಷೆ ಯಶಸ್ವಿಯಾದರೆ, ಸುಖೋಯ್ ಯುದ್ಧ ವಿಮಾನ ಹಾಗೂ ಆಕಾಶದಿಂದ ಭೂಮಿಗೆ ನೆಗೆಯುವ ಬ್ರಹ್ಮೋಸ್ ಕ್ಷಿಪಣಿಯ ಸಂಯೋಜನೆ ತೀಕ್ಷ್ಣ ಸರ್ಜಿಕಲ್ ದಾಳಿಗೆ ಭಾರತೀಯ ಸೇನಾ ಪಡೆಗೆ ನೆರವಾಗಲಿದೆ.

ಶತ್ರುಗಳ ಭೂಪ್ರದೇಶದ ಒಳಗಡೆ ಇರುವ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಈ ಬ್ರಹ್ಮೋಸ್ ಕ್ಷಿಪಣಿ ಹೊಂದಲಿದೆ. ಇದು ಸಾಗರದಾಳದಲ್ಲಿರುವ ವಿಮಾನ ವಾಹಕ ಸೇರಿದಂತೆ ಭೂಗತ ಪರಮಾಣು ಬಂಕರ್, ಆದೇಶ-ನಿಯಂತ್ರಣ ಕೇಂದ್ರ ಹಾಗೂ ಇತರ ಪ್ರಮುಖ ಸೇನಾ ಗುರಿಗಳನ್ನು ನಾಶಗೊಳಿಸುವ ಸಾಮರ್ಥ್ಯ ಹೊಂದಿರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News