200 ಕೋಟಿ ರೂ.ಬಾಚಿದ ಗೋಲ್‌ಮಾಲ್

Update: 2017-11-18 12:26 GMT

ಬಾಕ್ಸ್‌ಆಫೀಸ್‌ನಲ್ಲಿ ‘ಗೋಲ್‌ಮಾಲ್ ಎಗೇನ್’, ಈ ವರ್ಷದ ಎಲ್ಲಾ ಬಾಲಿವುಡ್ ಚಿತ್ರಗಳ ದಾಖಲೆಗಳನ್ನು ಪುಡಿಮಾಡಿ ಮುನ್ನುಗ್ಗುತ್ತಿದೆ. ಕೇವಲ ನಾಲ್ಕೇ ವಾರಗಳಲ್ಲಿ ಚಿತ್ರವು 200 ಕೋಟಿ ರೂ. ಬಾಚಿಕೊಂಡಿದೆ. ‘ಬಾಹುಬಲಿ 2’ ಬಳಿಕ ಈ ವರ್ಷದ ಗರಿಷ್ಠ ಗಳಿಕೆ ಕಂಡ ಚಿತ್ರವೆಂಬ ದಾಖಲೆಯನ್ನು ಅದು ತನ್ನ ಬಗಲಿಗೇರಿಸಿಕೊಂಡಿದೆ. ಅಷ್ಟೇ ಅಲ್ಲ, ಸಾರ್ವಕಾಲಿಕವಾಗಿ ಗರಿಷ್ಠ ಗಳಿಕೆಯನ್ನು ಕಂಡ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ ‘ಗೋಲ್‌ಮಾಲ್ ಎಗೇನ್’ 9ನೇ ಸ್ಥಾನವನ್ನು ಅಲಂಕರಿಸಿದೆ.

ಬಿಡುಗಡೆಯಾದ ಮೊದಲ ವಾರವೇ 134.93 ಕೋಟಿ ರೂ. ಗಳಿಸಿದ ‘ಗೋಲ್‌ಮಾಲ್ ಎಗೇನ್’ ಹೊಸ ದಾಖಲೆ ಸ್ಥಾಪಿಸಿತ್ತು. ‘ಸಿಂಗಮ್’, ‘ಚೆನ್ನೈ ಎಕ್ಸ್‌ಪ್ರೆಸ್’ನಂತಹ ಸೂಪರ್‌ಹಿಟ್ ಚಿತ್ರಗಳನ್ನು ನೀಡಿರುವ ರೋಹಿತ್ ಶೆಟ್ಟಿ ‘ಗೋಲ್‌ಮಾಲ್ ಎಗೇನ್’ನೊಂದಿಗೆ ತಾನೋರ್ವ ಸ್ಟಾರ್ ನಿರ್ದೇಶಕನೆಂಬುದನ್ನು ಸಾಬೀತುಪಡಿಸಿದ್ದಾರೆ.

ಕಾಮಿಡಿ, ಹಾರರ್ ಮನರಂಜನೆಯ ‘ಗೋಲ್‌ಮಾಲ್ ಎಗೇನ್’ನಲ್ಲಿ ಅಜಯ್‌ದೇವಗನ್, ಪರಿಣತಿ ಚೋಪ್ರಾ, ತುಶಾರ್ ಕಪೂರ್, ಕುನಾಲ್ ಖೇಮು ಮತ್ತಿತರ ಖ್ಯಾತ ಕಲಾವಿದರ ದಂಡೇ ಇದೆ. ಬಾಲಿವುಡ್‌ನ ಅಪ್ಪಟ ಪ್ರತಿಭೆ ಟಬೂ ಹಾಗೂ ನೀಲ್ ನಿತಿನ್ ಮುಖೇಶ್ ಕೂಡಾ ಪ್ರಮುಖ ಪಾತ್ರಗಳಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News