ರಾಝಿಯ ಗುಂಗಿನಲ್ಲಿ ಆಲಿಯಾ

Update: 2017-11-18 12:35 GMT

ಮೇಘನಾ ಗುಲ್ಝಾರ್ ನಿರ್ದೇಶನದ ಥ್ರಿಲ್ಲರ್ ಚಿತ್ರ ‘ರಾಝಿ’ ಬಗ್ಗೆ ಬಾಲಿವುಡ್ ನ ಪ್ರತಿಭಾವಂತ ನಟಿ ಆಲಿಯಾಭಟ್ ತುಂಬಾ ಎಕ್ಸೈಟ್ ಆಗಿದ್ದಾರೆ. ಹರಿಂದರ್ ಸಿಕ್ಕಾ ಬರೆದಿರುವ ಕಾಲಿಂಗ್ ಸೆಹ್ಮತ್ ಇಂಗ್ಲಿಷ್ ಕಾದಂಬರಿಯನ್ನು ಆಧರಿಸಿದ ಈ ಚಿತ್ರವು 1971ರ ಭಾರತ-ಪಾಕ್ ಯುದ್ಧದ ಸಂದರ್ಭದಲ್ಲಿ, ಭಾರತದ ಬೇಹುಗಾರಿಕಾ ದಳಕ್ಕೆ ಮಹತ್ವದ ಮಾಹಿತಿಯನ್ನು ಒದಗಿಸುವುದಕ್ಕಾಗಿ ಪಾಕ್ ಸೇನಾಧಿಕಾರಿಯನ್ನು ವಿವಾಹವಾಗುವ ಕಾಶ್ಮೀರಿ ಯುವತಿಯ ಕಥಾವಸ್ತುವನ್ನು ಹೊಂದಿದೆ. ಬಾಲಿವುಡ್‌ನ ಉದಯೋನ್ಮುಖ ಪ್ರತಿಭೆ ವಿಕಿ ಕೌಶಲ್, ಪಾಕ್ ಸೇನಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಏನಿದ್ದರೂ ಚಿತ್ರವು ಮುಂದಿನ ವರ್ಷದ ಮೇನಲ್ಲಿ ರಿಲೀಸ್ ಆಗಲಿದ್ದರೂ, ಆಲಿಯಾ ಭಟ್, ಚಿತ್ರದಲ್ಲಿನ ತನ್ನ ಫಸ್ಟ್‌ಲುಕ್ ಈಗಾಗಲೇ ಬಿಡುಗಡೆಗೊಳಿಸಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಹರಿಯಬಿಟ್ಟಿದ್ದಾರೆ.

‘ರಾಝಿ’ ಚಿತ್ರದಲ್ಲಿನ ತನ್ನ ಪಾತ್ರವು ಹಲವಾರು ತಿಂಗಳುಗಳಿಂದ ತನ್ನನ್ನು ಆವರಿಸಿಕೊಂಡು ಬಿಟ್ಟಿದೆ. ಚಿತ್ರೀಕರಣ ಮುಗಿದ ಬಳಿಕವೂ ಆ ಪಾತ್ರದಿಂದ ಹೊರಬರಲು ತನಗೆ ಕಷ್ಟವಾಗುತ್ತದೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿರುವ ಆಲಿಯಾ, ಚಿತ್ರದ ಬಿಡುಗಡೆಯನ್ನು ಕಾತರದಿಂದ ಎದುರುನೋಡುತ್ತಿರುವುದಾಗಿ ಹೇಳಿಕೊಂಡಿದ್ದಾಳೆ.

‘ಹೈವೇ’, ‘ಯೇ ದಿಲ್ ಹೈ ಮುಷ್ಕಿಲ್’, ‘ಬದರಿ ನಾಥ್ ಕಿ ದುಲ್ಹನಿಯಾ’, ‘ಕಪೂರ್ ಆ್ಯಂಡ್ ಸನ್ಸ್’ ಚಿತ್ರಗಳಲ್ಲಿ ತನ್ನ ಅದ್ಭುತ ಅಭಿನಯದಿಂದ ಬಾಲಿವುಡ್ ಪ್ರೇಕ್ಷಕರ ಮನ ಸೂರೆಗೊಂಡಿರುವ ಅಲಿಯಾ, ‘ರಾಝಿ’ ಚಿತ್ರವು ತನ್ನ ಚಿತ್ರಬದುಕಿಗೆ ಹೊಸ ಆಯಾಮವನ್ನು ನೀಡಲಿದೆಯೆಂಬ ಭರವಸೆ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News