ಡಿಸೆಂಬರ್ 1ರಂದು ‘ಪದ್ಮಾವತಿ’ಗಿಲ್ಲ ಬಿಡುಗಡೆ ಭಾಗ್ಯ

Update: 2017-11-19 10:57 GMT

ಹೊಸದಿಲ್ಲಿ, ನ.19: ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಚಲನಚಿತ್ರದ ಬಿಡುಗಡೆ ದಿನಾಂಕವನ್ನು ‘ಸ್ವಯಂಪ್ರೇರಣೆ’ಯಿಂದ ಮುಂದೂಡಲಾಗಿದೆ ಎಂದು ಚಿತ್ರದ ನಿರ್ಮಾಪಕರು ಹಾಗು ಹಂಚಿಕೆದಾರರ ವಕ್ತಾರರೊಬ್ಬರು ಮಾಹಿತಿ ನೀಡಿರುವುದಾಗಿ hindustantimes.com ವರದಿ ಮಾಡಿದೆ.

ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಹಾಗು ಶಾಹಿದ್ ಕಪೂರ್ ಮುಖ್ಯಭೂಮಿಕೆಯ ಈ ಚಿತ್ರದ ವಿರುದ್ಧ ರಜಪೂತ ಸಮುದಾಯ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಪದ್ಮಾವತಿ ವಿವಾದದ ಕೇಂದ್ರ ಬಿಂದುವಾಗಿದೆ.

ಈ ಹಿಂದೆ ತಿಳಿಸಿದ್ದ ಡಿಸೆಂಬರ್ 1ರಂದು ಪದ್ಮಾವತಿ ರಿಲೀಸ್ ಆಗುತ್ತಿಲ್ಲ. ಅಗತ್ಯ ಅನುಮತಿ ಸಿಕ್ಕ ನಂತರ ಚಿತ್ರ ಬಿಡುಗಡೆಯ ದಿನಾಂಕವನ್ನು ತಿಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News