ಭಾರತ-ಶ್ರೀಲಂಕಾ ಮೊದಲ ಟೆಸ್ಟ್ ಪಂದ್ಯ ಡ್ರಾ

Update: 2017-11-20 11:29 GMT

ಕೋಲ್ಕತಾ, ನ.20: ಅತ್ಯಂತ ಕುತೂಹಲ ಕೆರಳಿಸಿದ್ದ ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತು.

ಐದನೆ ಹಾಗೂ ಅಂತಿಮದಿನವಾದ ಸೋಮವಾರ ನಾಯಕ ವಿರಾಟ್ ಕೊಹ್ಲಿ ಸಿಡಿಸಿದ 18ನೆ ಶತಕದ(ಅಜೇಯ 104,119 ಎಸೆತ) ನೆರವಿನಿಂದ ಭಾರತ ತಂಡ ಮೊದಲ ಟೆಸ್ಟ್‌ನಲ್ಲಿ ಶ್ರೀಲಂಕಾದ ಗೆಲುವಿಗೆ 231 ರನ್ ಗುರಿ ನೀಡಿತು.

ವೇಗದ ಬೌಲರ್ ಭುವನೇಶ್ವರ ಕುಮಾರ್(4-8) ಹಾಗೂ ಮುಹಮ್ಮದ್ ಶಮಿ(2-34) ಶಿಸ್ತುಬದ್ಧ ಬೌಲಿಂಗ್‌ಗೆ ತತ್ತರಿಸಿದ ಶ್ರೀಲಂಕಾ 25.2 ಓವರ್‌ಗಳಲ್ಲಿ 75 ರನ್‌ಗೆ 7 ವಿಕೆಟ್‌ಗಳನ್ನು ಕಳೆದುಕೊಂಡು ಸೋಲುವ ಭೀತಿಯಲ್ಲಿತ್ತು.ಭಾರತದ ಗೆಲುವಿಗೆ 3 ವಿಕೆಟ್‌ಗಳ ಅಗತ್ಯವಿತ್ತು.

3 ಎಸೆತಗಳ ಆಟ ಬಾಕಿ ಇರುವಾಗ ಅಂಪೈರ್‌ಗಳು ಮಂದಬೆಳಕಿನಿಂದಾಗಿ ಪಂದ್ಯವನ್ನು ಕೊನೆಗೊಳಿಸಿದರು. ಆಗ ಶ್ರೀಲಂಕಾ 26.3 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿತ್ತು. ಶನಕ(6) ಹಾಗೂ ಹೆರಾತ್(0) ಕ್ರೀಸ್‌ನಲ್ಲಿದ್ದರು.  ಲಂಕೆಯ ಪರ 2ನೆ ಇನಿಂಗ್ಸ್‌ನಲ್ಲಿ ವಿಕೆಟ್‌ಕೀಪರ್ ನಿರೊಶನ್ ಡಿಕ್ವೆಲ್ಲಾ(27),ದಿನೇಶ್ ಚಾಂಡಿಮಾಲ್(20) ಹಾಗೂ ಆ್ಯಂಜೆಲೊ ಮ್ಯಾಥ್ಯೂಸ್ ಮಾತ್ರ ಎರಡಂಕೆಯ ಸ್ಕೋರ್ ದಾಖಲಿಸಿದರು. ಆರಂಭಿಕ ದಾಂಡಿಗ ಸಮರವಿಕ್ರಮ ಸಹಿತ ಮೂವರು ಶೂನ್ಯಕ್ಕೆ ಔಟಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News