ರೊಹಿಂಗ್ಯಾ ವಾಪಸಾತಿ ಬಗ್ಗೆ ಬಾಂಗ್ಲಾ ಜೊತೆ ಒಪ್ಪಂದ: ಸೂ ಕಿ ಭರವಸೆ

Update: 2017-11-21 16:15 GMT

ನೇಪಿಟಾವ್ (ಮ್ಯಾನ್ಮಾರ್), ನ. 21: ಈ ವಾರ ಬಾಂಗ್ಲಾದೇಶದೊಂದಿಗೆ ನಡೆಯುವ ಮಾತುಕತೆಯಲ್ಲಿ ರೊಹಿಂಗ್ಯಾ ಮುಸ್ಲಿಮರ ‘ಸುರಕ್ಷಿತ ವಾಪಸಾತಿ’ಯ ಬಗ್ಗೆ ಒಪ್ಪಂದವೊಂದು ಏರ್ಪಡುವುದು ಎಂಬ ಭರವಸೆ ಇದೆ ಎಂದು ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂ ಕಿ ಮಂಗಳವಾರ ಹೇಳಿದ್ದಾರೆ.

ಆಗಸ್ಟ್ 25ರಂದು ರೊಹಿಂಗ್ಯಾ ಬಂಡುಕೋರರು ಸೇನೆ ಮತ್ತು ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿದ ಬಳಿಕ ಮ್ಯಾನ್ಮಾರ್ ಸೇನೆ ನಡೆಸಿದ ದಮನ ಕಾರ್ಯಾಚರಣೆಗೆ ಬೆದರಿ ಆ ದೇಶದ ರಖೈನ್ ರಾಜ್ಯದಿಂದ 6.20 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

ಮ್ಯಾನ್ಮಾರ್ ರಾಜಧಾನಿ ನೇಪಿಟಾವ್‌ನಲ್ಲಿ ನಡೆದ ಏಶ್ಯ-ಯುರೋಪ್ ಸಭೆ (ಎಎಸ್‌ಇಎಂ)ಯ ಮುಕ್ತಾಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೂ ಕಿ ಈ ವಿಷಯ ತಿಳಿಸಿದರು.

ಈ ಸಭೆಯ ನೇಪಥ್ಯದಲ್ಲಿ ರೊಹಿಂಗ್ಯಾ ಮುಸ್ಲಿಮರ ದುರ್ದೆಸೆ ಮತ್ತು ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ನೆಲೆಸಿರುವ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲಾಯಿತು. ಹೆಚ್ಚಿನ ರೊಹಿಂಗ್ಯಾ ಮುಸ್ಲಿಮರು ರಖೈನ್ ರಾಜ್ಯದಲ್ಲಿ ವಾಸಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News