ಹಫೀಝ್ ಸಯೀದ್ ಬಿಡುಗಡೆಗೆ ನ್ಯಾಯಮಂಡಳಿ ಆದೇಶ

Update: 2017-11-22 15:01 GMT

ಲಾಹೋರ್, ನ. 22: ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರಿ ಹಾಗೂ ಲಷ್ಕರ್ ಎ ತೊಯ್ಬಾ ಭಯೋತ್ಪಾದಕ ಸಂಘಟನೆಯ ಸ್ಥಾಪಕ ಹಫೀಝ್ ಸಯೀದ್‌ನ ಗೃಹಬಂಧನ ಅವಧಿಯನ್ನು ವಿಸ್ತರಿಸುವಂತೆ ಅಧಿಕಾರಿಗಳು ಸಲ್ಲಿಸಿದ ಮನವಿಯನ್ನು ಪಾಕಿಸ್ತಾನದ ನ್ಯಾಯಾಂಗ ಪರಿಶೀಲನಾ ಮಂಡಳಿ ಬುಧವಾರ ತಳ್ಳಿಹಾಕಿದೆ ಹಾಗೂ ಭಯೋತ್ಪಾದಕನನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿದೆ.

ಸಯೀದ್‌ನನ್ನು ಈ ವರ್ಷದ ಜನವರಿಯಿಂದ ಗೃಹಬಂಧನದಲ್ಲಿಡಲಾಗಿದೆ. ಭಯೋತ್ಪಾದಕರ ಆರ್ಥಿಕ ಮೂಲವನ್ನು ಪತ್ತೆಹಚ್ಚುವ ಪ್ಯಾರಿಸ್‌ನ ಹಣಕಾಸು ಕ್ರಿಯಾ ಪಡೆಯ ಒತ್ತಡದಿಂದಾಗಿ ಆತನನ್ನು ಗೃಹಬಂಧನದಲ್ಲಿಡಲಾಗಿತ್ತು.

 ಸಯೀದ್‌ನ ಬಂಧನವನ್ನು ಮೂರು ತಿಂಗಳು ವಿಸ್ತರಿಸುವಂತೆ ಪಾಕಿಸ್ತಾನದ ಪಂಜಾಬ್ ರಾಜ್ಯ ಸರಕಾರ ಮನವಿ ಮಾಡಿತ್ತು. ಆದರೆ, ಈ ಬೇಡಿಕೆಯನ್ನು ನ್ಯಾಯಾಂಗ ಪರಿಶೀಲನಾ ಮಂಡಳಿಯು ತಳ್ಳಿಹಾಕಿದೆ.

ಜಮಾಅತ್ ಉದ್‌ದಾವ ಸಂಘಟನೆಯ ಮುಖ್ಯಸ್ಥನೂ ಆಗಿರುವ ಹಫೀಜ್ ಗುರುವಾರ ಬಿಡುಗಡೆಗೊಳ್ಳಲಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News