ಬಾಲಿವುಡ್‌ನ ಬಾಕ್ಸ್ ಆಫೀಸ್ ಸುಲ್ತಾನ್

Update: 2017-11-25 10:49 GMT

ಸಲ್ಮಾನ್ ಖಾನ್ ಕೈಯಲ್ಲಿ ಈಗಾಗಲೇ ನಾಲ್ಕೈದು ಪ್ರಾಜೆಕ್ಟ್ ಗಳಿದ್ದು, ಮುಂದಿನ ಎರಡು ವರ್ಷಗಳ ತನಕ ಅವರು ತುಂಬಾ ಬ್ಯುಸಿಯೆನೆಸಿಕೊಳ್ಳಲಿದ್ದಾರೆ. ‘ರೇಸ್ 3’ ಹಾಗೂ ‘ಭಾರತ್’ ಸದ್ಯದಲ್ಲೇ ಸೆಟ್ಟೇರುವುದು ಖಚಿತವಾಗಿದೆ. ಮುಂದಿನ ಈದ್ ಹಾಗೂ ಕ್ರಿಸ್‌ಮಸ್ ಹಬ್ಬಗಳ ರಜಾದಿನಗಳಲ್ಲಿ ಪ್ರೇಕ್ಷಕರನ್ನು ಸಲ್ಮಾನ್ ಅಭಿನಯದ ಚಿತ್ರಗಳು ರಂಜಿಸುವುದು ಗ್ಯಾರಂಟಿಯೆನಿಸಿದೆ.

ಸಲ್ಮಾನ್ ಬೇಹುಗಾರನ ಪಾತ್ರದಲ್ಲಿ ನಟಿಸಲಿರುವ ‘ಟೈಗರ್ ಜಿಂದಾ ಹೈ’ ಡಿಸೆಂಬರ್ 22ಕ್ಕೆ ರಿಲೀಸ್ ಆಗುವುದು ಖಚಿತವಾಗಿದೆ. ಅಲಿ ಅಬ್ಬಾಸ್ ಝಫರ್ ನಿರ್ದೇಶನದ ಈ ಚಿತ್ರವು ಬಾಕ್ಸ್ ಆಫೀಸ್‌ನ್ನು ಚಿಂದಿ ಉಡಾಯಿಸುವ ನಿರೀಕ್ಷೆಯಿದೆ. ಕತ್ರಿನಾ ಕೈಫ್ ನಾಯಕಿ ಯಾಗಿರುವ ಈ ಚಿತ್ರವು ಸೂಪರ್‌ಹಿಟ್ ಚಿತ್ರವಾದ ‘ಟೈಗರ್ ಜಿಂದಾ ಹೈ’ ಚಿತ್ರದ ಮುಂದುವರಿದ ಭಾಗವಾಗಿದೆ. ಸಲ್ಮಾನ್ ಖಾನ್ ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಳ್ಳಲಿರುವ ‘ರೇಸ್ 3’ ಕೂಡಾ ಸಾಕಷ್ಟು ಕಾರಣಗಳಿಂದಾಗಿ ಬಾಲಿವುಡ್‌ನ ಗಮನ ಸೆಳೆಯುತ್ತಿದೆ. ಕಿಕ್ ಬಳಿಕ ಸಲ್ಮಾನ್‌ಖಾನ್‌ಗೆ ನಾಯಕಿಯಾಗಿ ಜಾಕ್ವೆಲಿನ್ ಫೆರ್ನಾಂಡಿಸ್, ನಟಿಸಲಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನೃತ್ಯನಿರ್ದೇಶಕ, ‘ರೇಸ್ 3’ ಗಾಗಿ ಡೈರೆಕ್ಟರ್ಸ್‌ ಕ್ಯಾಪ್ ಧರಿಸಿದ್ದಾರೆ. ರೇಮೋ ಈ ಮೊದಲು ಎಬಿಸಿಡಿ ಸರಣಿಯ ಚಿತ್ರಗಳನ್ನು ನಿರ್ದೇಶಿಸಿದ್ದರು. ಅದ್ದೂರಿ ಬಜೆಟ್‌ನ ‘ರೇಸ್ 3’ ಮುಂದಿನ ವರ್ಷ ಬೆಳ್ಳಿತೆರೆಗೆ ಅಪ್ಪಳಿಸಲು ಸಜ್ಜಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News