‘ಇಂಡಿಯನ್ 2’ಗೆ ಮಿಸ್‌ವರ್ಲ್ಡ್ ಮಾನುಷಿ

Update: 2017-11-25 10:53 GMT

ಹದಿನೇಳು ವರ್ಷಗಳ ಸುದೀರ್ಘ ಅಂತರದ ಬಳಿಕ ಮಿಸ್ ವಲ್ಡ್ ಕಿರೀಟ ಧರಿಸಿದ ಹರ್ಯಾಣದ ಕುವರಿ ಮಾನುಷಿ ಚಿಲ್ಲರ್ ಬೆಳ್ಳಿತೆರೆಯನ್ನು ಅಲಂಕರಿಸುವ ದಿನಗಳು ದೂರವಿಲ್ಲ. ತಮಿಳಿನ ಖ್ಯಾತ ನಿರ್ದೇಶಕ ಶಂಕರ್, ‘ಯಂದಿರನ್ 2.0’ ಬಳಿಕ ನಿರ್ದೇಶಿಸಲಿರುವ ‘ಇಂಡಿಯನ್ 2’ ಚಿತ್ರದಲ್ಲಿ ಮಾನುಷಿ ನಾಯಕಿಯಾಗಿ ನಟಿಸಲಿದ್ದಾರೆ. ಹಾಗಂತ, ಇಂಗ್ಲಿಷ್ ಪತ್ರಿಕೆಯೊಂದು ವರದಿ ಮಾಡಿದೆ. ಈ ವಿಷಯವಾಗಿ ಶಂಕರ್ ಅವರ ಚಿತ್ರ ನಿರ್ಮಾಣ ಸಂಸ್ಥೆ ಹಾಗೂ ಮಾನುಷಿ ಅವರ ಮ್ಯಾನೇಜರ್ ನಡುವೆ ಮಾತುಕತೆಗಳು ನಡೆಯುತ್ತಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿವೆ. ಚಿತ್ರಕ್ಕೆ ಮಾನುಷಿ ಓ.ಕೆ. ಅಂದಲ್ಲಿ ಪ್ರಿಯಾಂಕಾ ಚೋಪ್ರಾ ಹಾಗೆ ಮಾನುಷಿ ಕೂಡಾ ತಮಿಳು ಸಿನೆಮಾದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ ಮಿಸ್‌ವರ್ಲ್ಡ್ ಎನಿಸಿಕೊಳ್ಳಲಿದ್ದಾರೆ.

ಕಮಲ್‌ಹಾಸನ್ ನಾಯಕನಾಗಿ ಅಭಿನಯಿಸಲಿರುವ ‘ಇಂಡಿಯನ್ 2’ ಚಿತ್ರವು ‘ತಿಂಡಿಯನ್’ ಚಿತ್ರದ ಮುಂದುವರಿದ ಭಾಗವಾಗಿದೆ. ಪ್ರಚಂಡ ಗೆಲುವು ಸಾಧಿಸಿದ ಇಂಡಿಯನ್ ಚಿತ್ರದಲ್ಲಿ ಮನೀಶಾ ಕೊಯಿರಾಲಾ ನಾಯಕಿಯಾಗಿ ನಟಿಸಿದ್ದರು.

200 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ‘ಇಂಡಿಯನ್ 2’ಗೆ ಎ.ಆರ್. ರಹ್ಮಾನ್ ಸಂಗೀತ ನೀಡಲಿದ್ದಾರೆ. ಹಾಲಿವುಡ್‌ನ ಖ್ಯಾತ ಸಾಹಸ ನಿರ್ದೇಶಕ ಪೀಟರ್ ಹೆಮ್ಯಾನ್, ಸಾಹಸ ದೃಶ್ಯಗಳನ್ನು ಸಂಯೋಜಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News