ಶ್ರೀದೇವಿ ಪುತ್ರಿ ಜಾಹ್ನವಿ ಬಾಲಿವುಡ್‌ಗೆ ಎಂಟ್ರಿ

Update: 2017-11-25 10:57 GMT

ಎವರ್‌ಗ್ರೀನ್ ಹೀರೋಯಿನ್ ಎನಿಸಿರುವ ಶ್ರೀದೇವಿಯ ಮುದ್ದಿನ ಮಗಳು, ಜಾಹ್ನವಿ ಕಪೂರ್‌ಳ ಬೆಳ್ಳಿತೆರೆ ಪ್ರವೇಶಕ್ಕೆ ವೇದಿಕೆ ಸಜ್ಜಾಗಿದೆ. ಅದೂ ಕೂಡಾ ಬಿಗ್ ಬ್ಯಾನರ್ ಚಿತ್ರವೊಂದರಲ್ಲಿ ನಾಯಕಿಯಾಗಿ ನಟಿಸುವ ಸುವರ್ಣಾವಕಾಶ ಆಕೆಗೆ ದೊರೆತಿದೆ. ಬಾಲಿವುಡ್‌ನ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್‌ಜೋಹರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹದಿಹರೆಯದ ಪ್ರೇಮಕಥೆಯಿರುವ ಮರಾಠಿಯ ಸೂಪರ್‌ಹಿಟ್ ಚಿತ್ರ ಸೈರಾಟ್‌ನ ರಿಮೇಕ್ ಇದೆಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ಕರಣ್ ಅವರು ಸೈರಾಟ್‌ನ ರಿಮೇಕ್ ಹಕ್ಕುಗಳನ್ನು ಪಡೆದುಕೊಂಡಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಜಾಹ್ನವಿಗೆ ನಾಯಕನಾಗಿ, ಜನಪ್ರಿಯ ಬಾಲಿವುಡ್ ನಟ ಶಾಹಿದ್ ಕಪೂರ್‌ನ ಸೋದರ, ಇಶಾನ್ ಕಟ್ಟರ್ ನಟಿಸುತ್ತಿದ್ದಾರೆ. ಜಾಹ್ನವಿಗೆ ಇದು ಚೊಚ್ಚಲ ಚಿತ್ರವಾದರೂ, ಇಶಾನ್ ಈಗಾಗಲೇ ಬಿಯೋಂಡ್ ದಿ ಕ್ಲೌಡ್ಸ್ ಬಾಲಿವುಡ್ ಚಿತ್ರದಲ್ಲಿ ನಟಿಸಿದ್ದು, ಅದು ಇನ್ನಷ್ಟೇ ತೆರೆಕಾಣಬೇಕಿದೆ. ತಾಯಿ ಶ್ರೀದೇವಿಯಂತೆ ಜಾಹ್ನವಿ ಕೂಡಾ ಬಾಲಿವುಡ್‌ನಲ್ಲಿ ಹೆಸರು ಪಡೆಯುವರೇ ಎಂಬುದನ್ನು ಬಿಟೌನ್ ಕಾತರದಿಂದ ನಿರೀಕ್ಷಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News