×
Ad

ಅತ್ಯಾಚಾರ ನಡೆಸಿದವರಿಗೆ ಮರಣದಂಡನೆ ಶಿಕ್ಷೆ: ಮಧ್ಯಪ್ರದೇಶ ಸಂಪುಟ ಅನುಮೋದನೆ

Update: 2017-11-26 23:25 IST

ಭೋಪಾಲ್, ನ.26: 12 ಹಾಗೂ ಅದಕ್ಕಿಂತ ಕೆಳಹರೆಯದವರನ್ನು ಅತ್ಯಾಚಾರ ನಡೆಸುವವರಿಗೆ ಮರಣದಂಡನೆ ಶಿಕ್ಷೆ ನೀಡುವ ನಿರ್ಣಯಕ್ಕೆ ಮಧ್ಯಪ್ರದೇಶ ಸಚಿವ ಸಂಪುಟ ಅನುಮೋದನೆ ನೀಡಿದೆ.

 ಅಲ್ಲದೆ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳಾದವರಿಗೂ ಮರಣ ದಂಡನೆ ವಿಧಿಸುವ ನಿರ್ಣಯವನ್ನು ಹಾಗೂ ಅತ್ಯಾಚಾರ ಅಪರಾಧಿಗಳಿಗೆ ನೀಡುವ ಶಿಕ್ಷೆಯ ಪ್ರಮಾಣ ಮತ್ತು ದಂಡದ ಪ್ರಮಾಣವನ್ನು ಹೆಚ್ಚಿಸುವ ನಿರ್ಣಯಕ್ಕೂ ಸಚಿವ ಸಂಪುಟ ಅನುಮೋದನೆ ನೀಡಿದೆ. ಮಧ್ಯಪ್ರದೇಶ ರಾಜ್ಯದಲ್ಲಿ ಮಹಿಳೆಯರ ವಿರುದ್ಧದ ದುಷ್ಕೃತ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇದಕ್ಕೂ ಮುನ್ನ ರಾಜ್ಯದ ಗೃಹ ಸಚಿವ ಭೂಪೇಂದ್ರ ಸಿಂಗ್ ಹೇಳಿಕೆ ನೀಡಿದ್ದರು.  ಹೆಚ್ಚುವರಿ ಎಸ್‌ಪಿ ರವಿಂದ್ರ ವರ್ಮ ತನ್ನ ಮೇಲೆ ಲೈಂಗಿಕ ಹಲ್ಲೆ ನಡೆಸಿರುವುದಾಗಿ ರವಿವಾರ ಮಹಿಳಾ ಕಾನ್‌ಸ್ಟೆಬಲ್ ಓರ್ವರು ಆರೋಪಿಸಿದ್ದರು. ಈ ಕುರಿತು ತಾನು ದೂರು ನೀಡಿದ್ದು ತನಿಖೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಮುಖ್ಯಮಂತ್ರಿ ಶಿವರಾಜ್ ಚೌಹಾಣ್‌ರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಸಂದರ್ಭ ಮಹಿಳಾ ಕಾನ್‌ಸ್ಟೆಬಲ್ ದೂರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News