30 ಕೋಟಿ ರೂ. ತೆರಿಗೆ ಪಾವತಿಸುವಂತೆ ಆಪ್ ಗೆ ಐಟಿ ನೊಟೀಸ್

Update: 2017-11-27 15:13 GMT

ಹೊಸದಿಲ್ಲಿ, ನ. 27: 30.67 ಕೋಟಿ ರೂ.  ತೆರಿಗೆ ಪಾವತಿಸುವಂತೆ ನೊಟೀಸು ಜಾರಿ ಮಾಡುವ ಮೂಲಕ ಆದಾಯ ತೆರಿಗೆ ಇಲಾಖೆ ಅರವಿಂದ್ ಕೇಜ್ರಿವಾಲ್‌ರ ಆಮ್ ಆದ್ಮಿ ಪಕ್ಷಕ್ಕೆ ತಪರಾಕಿ ನೀಡಿದೆ.

  ಆಮ್ ಆದ್ಮಿ ಪಕ್ಷ 13 ಕೋಟಿ ರೂ. ಆದಾಯ ಬಹಿರಂಗಪಡಿಸಿಲ್ಲ ಎಂದು ಉಲ್ಲೇಖಿಸಿರುವ ಆದಾಯ ತೆರಿಗೆ ಇಲಾಖೆ, 6 ಕೋಟಿ ರೂ. ದೇಣಿಗೆ ನೀಡಿದ 462 ದಾನಿಗಳ ಪೂರ್ಣ ವಿವರಗಳನ್ನು ದಾಖಲಿಸದೇ ಇರುವುದಕ್ಕೆ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದೆ.

ಪಕ್ಷಕ್ಕೆ 20 ಸಾವಿರ ರೂಪಾಯಿಗಿಂತ ಹೆಚ್ಚು ದೇಣಿಗೆ ನೀಡಿದ ದಾನಿಗಳ ಪಟ್ಟಿ ರೂಪಿಸಿರುವ ಆದಾಯ ತೆರಿಗೆ ಇಲಾಖೆ ಎಎಪಿಗೆ ನೊಟೀಸು ಜಾರಿ ಮಾಡಿದೆ.

  ಹಣಕಾಸು ವರ್ಷ 2014-15 ಹಾಗೂ 2015-16ರಲ್ಲಿ ಎಎಪಿ ತೆರಿಗೆ ನೀಡಬೇಕಾಗಿದ್ದ ಆದಾಯ 68.44 ಕೋ. ರೂ. ಎಂದು ನೊಟೀಸಿನಲ್ಲಿ ಅಂದಾಜಿಸಲಾಗಿದೆ. ನೊಟೀಸಿನ ಪ್ರಕಾರ ಪಕ್ಷ ದೇಣಿಗೆಯಿಂದ ಬಂದ 13 ಕೋಟಿ ರೂಪಾಯಿ ಮೂಲ ಬಹಿರಂಗಪಡಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News