×
Ad

ನಾಗರಿಕರ ನೋವಿಗೆ ಸ್ಪಂದಿಸದ ಸರಕಾರ ಉಳಿಯದು : ಕಮಲ್

Update: 2017-11-27 21:49 IST

ಚೆನ್ನೈ, ನ.27: ಪಾದಚಾರಿಗಳ ಜೀವಕ್ಕೆ ಬೆಲೆಕೊಡದ ಸರಕಾರ ಸುದೀರ್ಘಾವಧಿಯವರೆಗೆ ಪಲ್ಲಕ್ಕಿಯಲ್ಲಿ ಸವಾರಿ ಮಾಡಲು ಸಾಧ್ಯವಿಲ್ಲ ಎಂದು ನಟ ಕಮಲ್‌ಹಾಸನ್ ಟ್ವೀಟ್ ಮಾಡಿದ್ದಾರೆ.

   ಕೊಯಂಬತ್ತೂರಿನಲ್ಲಿ ಶುಕ್ರವಾರ ನಡೆದ ಘಟನೆಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಚಲಾಯಿಸುತ್ತಿದ್ದ ಬೈಕ್ ರಸ್ತೆ ಬದಿ ನಿಲ್ಲಿಸಲಾಗಿದ್ದ ಮರದ ಕಂಬಕ್ಕೆ ಢಿಕ್ಕಿಯಾಗಿ ಆತ ಮೃತಪಟ್ಟಿದ್ದ. ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ.ರಾಮಚಂದ್ರನ್ ಜನ್ಮ ಶತಮಾನೋತ್ಸವ ಆಚರಣೆಯ ಅಂಗವಾಗಿ ರಸ್ತೆ ಬದಿ ಅಲಂಕಾರ ಮಾಡಿದಾಗ ಈ ಕಂಬವನ್ನು ಅಲ್ಲಿ ನಿಲ್ಲಿಸಲಾಗಿತ್ತು. ಈ ಘಟನೆಯನ್ನು ಕಮಲ್ ಟೀಕಿಸಿದ್ದಾರೆ.

  ಮನುಷ್ಯರ ಭಾವನೆಗಳಿಗೆ, ಕಷ್ಟನಷ್ಟಗಳಿಗೆ ಸರಕಾರ ಬೆಲೆಕೊಡಬೇಕು. ಇಲ್ಲದಿದ್ದರೆ ಆ ಸರಕಾರ ಹೆಚ್ಚು ಕಾಲ ಅಧಿಕಾರದಲ್ಲಿರಲು ಸಾಧ್ಯವಿಲ್ಲ ಎಂದು ಕಮಲ್ ಹೇಳಿದ್ದಾರೆ. ಕಮಲ್ ಜತೆ ಧ್ವನಿಗೂಡಿಸಿರುವ ಪಿಎಂಕೆ ಮುಖಂಡ ಅನ್ಬುಮಣಿ ರಾಮದಾಸ್, ಮಾರ್ಗದಲ್ಲಿ ಈ ರೀತಿ ಕಂಬ ನೆಡಲು ಸಂಬಂಧಿಸಿದ ಅಧಿಕಾರಿಗಳಿಂದ ಅನುಮತಿ ಪಡೆದುಕೊಂಡಿಲ್ಲ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News