×
Ad

ಮಲೇಷ್ಯಾದಿಂದ ಮರಳು ಆಮದಿಗೆ ಮದ್ರಾಸ್ ಹೈಕೋರ್ಟ್‌ ಅಸ್ತು

Update: 2017-11-29 18:07 IST

ಚೆನ್ನೈ,ನ.29: ಮದ್ರಾಸ್ ಉಚ್ಚ ನ್ಯಾಯಾಲಯದ ಮದುರೈ ಪೀಠವು ಮಲೇಷ್ಯಾದಿಂದ ಮರಳು ಆಮದಿಗೆ ಬುಧವಾರ ಅನುಮತಿಯನ್ನು ನೀಡಿದೆ. ಆರು ತಿಂಗಳುಗಳಲ್ಲಿ ಅಕ್ರಮ ಮರಳುಗಾರಿಕೆಯನ್ನು ನಿಲ್ಲಿಸುವಂತೆ ತಮಿಳುನಾಡು ಸರಕಾರಕ್ಕೆ ನಿರ್ದೇಶ ನೀಡಿರುವ ಅದು, ಹೊಸದಾಗಿ ಮರಳು ಗಣಿಗಾರಿಕೆಯನ್ನು ನಿರ್ಬಂಧಿಸಿದೆ.

  ಆಮದು ಮರಳಿನ ನಿಯಂತ್ರಣ ಮತ್ತು ನಿರ್ವಹಣೆಗಾಗಿ ಯಾವುದೇ ಶಾಸನ ಅಥವಾ ತಿದ್ದುಪಡಿಗಳನ್ನು ತರಲು ಸರಕಾರವು ಸ್ವತಂತ್ರವಿದೆ ಎಂದು ಹೇಳಿದ ಪೀಠವು, ಅಕ್ರಮ ಮರಳುಗಾರಿಕೆ ಮತ್ತು ಸಾಗಾಣಿಕೆಯನ್ನು ತಡೆಯಲು ಶಾಶ್ವತ ತನಿಖಾ ಠಾಣೆಗಳನ್ನು ಸ್ಥಾಪಿಸುವಂತೆಯೂ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News