×
Ad

ಸಿಪಿಐ ಹಿರಿಯ ನಾಯಕ ಚಂದ್ರಶೇಖರನ್ ನಾಯರ್ ನಿಧನ

Update: 2017-11-29 19:18 IST

ತಿರುವನಂತಪುರಂ, ನ.29: ಸಿಪಿಐ ಹಿರಿಯ ನಾಯಕ ಹಾಗು ಕೇರಳದ ಮಾಜಿ ಸಚಿವ ಇ.ಚಂದ್ರಶೇಖರನ್ ನಾಯರ್ (89) ಬುಧವಾರ ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಶನಿವಾರ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ನಿಧನರಾದರು.

1980-81, 1987-91 ಹಾಗು 1996-2001ರ ಅವಧಿಯಲ್ಲಿ ಎಲ್ ಡಿಎಫ್ ಕ್ಯಾಬಿನೆಟ್ ನಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದ ನಾಯರ್ ಕೆಲ ವರ್ಷಗಳಿಂದ ರಾಜಕಾರಣದಿಂದ ದೂರ ಉಳಿದಿದ್ದರು.

ನಾಯರ್ ಅವರ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News