ಪನಾಮಾ ಪೇಪರ್ಸ್ ಸೋರಿಕೆ ಪ್ರಕರಣ: ಹಲವೆಡೆ ಐಟಿ ದಾಳಿ

Update: 2017-11-29 13:55 GMT

ಹೊಸದಿಲ್ಲಿ, ನ.29: ಪನಾಮಾ ಪೇಪರ್ಸ್ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ತೆರಿಗೆ ತಪ್ಪಿಸುವಿಕೆಗೆ ಸಂಬಂಧಿಸಿದಂತೆ ಆದಾಯ ತೆರಿಗೆ(ಐಟಿ) ದಿಲ್ಲಿ ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್)ವ್ಯಾಪ್ತಿಯ ಹಲವೆಡೆ ಮಂಗಳವಾರ ದಾಳಿ ನಡೆಸಿದೆ.

 ದಿಲ್ಲಿ, ಗಾಝಿಯಾಬಾದ್ ಮತ್ತು ಫರೀದಾಬಾದ್‌ನಲ್ಲಿ ಆಹಾರ ಸಂಸ್ಕರಣೆ, ಹಣಕಾಸು ಸೇವೆ ನೀಡುವುದು ಹಾಗೂ ಟಯರ್ ವ್ಯವಹಾರದಲ್ಲಿ ತೊಡಗಿರುವ ಮೂರು ಸಂಸ್ಥೆಗಳ ಕಚೇರಿ ಮೇಲೆ ದಾಳಿ ನಡೆಸಲಾಗಿದ್ದು 4 ಕೋಟಿ ರೂ.ಗೂ ಹೆಚ್ಚಿನ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಹಲವು ದಾಖಲೆಪತ್ರಗಳು, ಕಂಪ್ಯೂಟರ್ ಹಾರ್ಡ್‌ಡಿಸ್ಕ್, ಸಿಡಿಗಳನ್ನೂ ವಶಕ್ಕೆ ಪಡೆದಿರುವುದಾಗಿ ಐಟಿ ಮೂಲಗಳು ತಿಳಿಸಿವೆ. ಈ ಸಂಸ್ಥೆಗಳು ತಮ್ಮ ವಾಸ್ತವಿಕ ವ್ಯವಹಾರ ಮತ್ತು ಆದಾಯವನ್ನು ಮರೆಮಾಚಿರುವುದು ಶೋಧ ಕಾರ್ಯಾಚರಣೆ ವೇಳೆ ಬಹಿರಂಗವಾಗಿದೆ. ದಿಲ್ಲಿ- ಎನ್‌ಸಿಆರ್ ವ್ಯಾಪ್ತಿಯಲ್ಲಿ ಕನಿಷ್ಟ 25 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News