ತಮಿಳುನಾಡು ಕರಾವಳಿಯಾದ್ಯಂತ ಭಾರೀ ಮಳೆ: 'ಓಕೀ' ಸೈಕ್ಲೋನ್ ಭೀತಿ

Update: 2017-11-30 09:35 GMT

ಚೆನ್ನೈ, ನ.30: ಗುರುವಾರ ಬೆಳಗ್ಗೆಯಿಂದ ತಮಿಳುನಾಡಿನ ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, 'ಓಕೀ' ಸೈಕ್ಲೋನ್ ಭೀತಿ ಎದುರಾಗಿದೆ. ಚಂಡಮಾರುತವು ಲಕ್ಷದ್ವೀಪದ ಕಡೆಗೆ ಸಾಗಿದ್ದು, ಪರಿಣಾಮ ತಮಿಳುನಾಡಿನಾದ್ಯಂತ ಭಾರೀ ಮಳೆಯಾಗುತ್ತಿದೆ.

ತೂತುಕುಡಿ, ತಿರುನಲ್ವೇಲಿ, ಕನ್ಯಾಕುಮಾರಿ, ಸೇರಿದಂತೆ 7 ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳು ಮುಚ್ಚಿದೆ. ತೂತುಕುಡಿಯಲ್ಲಿ ಗಾಳಿಯ ತೀವ್ರತೆ ಹೆಚ್ಚಿದ್ದು, ಮರಗಳು ನೆಲಕ್ಕುರುಳಿದ್ದು, ಕೆಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ದಕ್ಷಿಣ ತಮಿಳುನಾಡು ಹಾಗು ದಕ್ಷಿಣ ಕೇರಳದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಗಂಟೆಗೆ 65-75 ಕಿ,ಮೀ. ವೇಗದಲ್ಲಿ ಗಾಳಿ ಬೀಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಲಕ್ಷದ್ವೀಪ ಹಾಗು ದಕ್ಷಿಣ ಕೇರಳದಲ್ಲೂ ಭಾರೀ ಮಳೆಯಾಗಲಿದೆ. ಇಲ್ಲಿ ಗಂಟೆಗೆ 55ರಿಂದ 75 ಕಿ,ಮೀ. ವೇಗದಲ್ಲಿ ಗಾಳಿ ಬೀಸಬಹುದು ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News