ಚಿತ್ರದ ಹೆಸರೇ '3rd ಕ್ಲಾಸ್' !

Update: 2017-11-30 18:46 GMT

ಸಾಮಾನ್ಯವಾಗಿ ಥರ್ಡ್ ಕ್ಲಾಸ್ ಎನ್ನುವ ಪದವನ್ನು ಗುಣಮಟ್ಟ ರಹಿತ ವಿಚಾರಗಳಿಗಾಗಿ ಬಳಸುತ್ತೇವೆ. ಆದರೆ 'ಥರ್ಡ್ ಕ್ಲಾಸ್' ಚಿತ್ರತಂಡ ತಮ್ಮದು ಫಸ್ಟ್ ಕ್ಲಾಸ್ ಸಿನಿಮಾ ಎಂದು ಹೇಳುತ್ತಲೇ ಆ ಹೆಸರನ್ನು ಪ್ರಚಾರಕ್ಕೆ ಬಳಸಿದ್ದಾರೆ.

ತಮಿಳು‌ ಚಿತ್ರಗಳಲ್ಲಿ ಜಗದೀಶ್ ಪವಾರ್ ಚಿತ್ರದಲ್ಲಿ ನಾಯಕನಾಗಿದ್ದು ಗ್ಯಾರೇಜ್ ಹುಡುಗನ ಪಾತ್ರ ನಿರ್ವಹಿಸಿದ್ದಾರೆ. ಅನಾಥ, ಅವಿದ್ಯಾವಂತನಾದ ಆತನ  ಬದುಕಿನಲ್ಲಿ ಏನೆಲ್ಲ ನಡೆಯುತ್ತದೆ ಎನ್ನುವುದೇ ಚಿತ್ರದ ಕತೆ ಎಂದು ಅವರು ಹೇಳಿದ್ದಾರೆ. ಖುದ್ದು ಜಗದೀಶ್ ಪವಾರ್ ಅವರೇ ಕತೆ ಬರೆದಿದ್ದಾರೆ. 

ಚಿತ್ರದಲ್ಲಿ‌ ನಾಲ್ಕು ಹಾಡುಗಳು, ಮೂರು ಹೊಡೆದಾಟದ ದೃಶ್ಯಗಳಿವೆಯಂತೆ.ಶಶಿ ನಾಯ್ಕ್ ಸಿವಿಲ್ ಇಂಜಿನಿಯರ್ ಮತ್ತು ಕಂಟ್ರ್ಯಾಕ್ಟರ್ ಆಗಿದ್ದು ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಹಾಡಿನ ಚಿತ್ರೀಕರಣ ಬಾಕಿಯಿದೆ ಎನ್ನುವುದು ಅವರ ಅಭಿಪ್ರಾಯ.

ನಿರ್ದೇಶಕ ಅಶೋಕ್ ದೇವ್ "ಅಸೋಸಿಯೇಟ್ ಆಗಿದ್ದ ನನಗೆ ಈ ಮೂಲಕ ಒಳ್ಳೆಯ ಚಿತ್ರ ಮಾಡಲು ಅನಿರೀಕ್ಷಿತ ಅವಕಾಶ ದೊರೆಯಿತು. ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದಾರೆ. ಅನುರಾಧ ಭಟ್, ಶಶಾಂಕ್ ಶೇಷಗಿರಿ ಮೊದಲಾದವರು ಹಾಡಿರುವ ಗೀತೆಗಳು ಕೂಡ‌ ಆಕರ್ಷಕವಾಗಿದೆ ಎಂದರು.
ಥರ್ಡ್ ಕ್ಲಾಸ್ ಚಿತ್ರದಲ್ಲಿ  ವಿಕಾಸ್ ಎಸ್ ನಾಯಕ್ ಕೂಡ ನಾಯಕ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದಾರೆ.

ದೇವನಹಳ್ಳಿ, ಬನಶಂಕರಿ, ವಿಜಯನಗರ ಗ್ಯಾರೇಜ್ ಬಳಿಯಲ್ಲಿ ತಿಂಗಳ ಕಾಲಾವಧಿಯಲ್ಲಿ ಸಿನಿಮಾದ ಟಾಕಿ‌ ಪೋರ್ಶನ್ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ.  ನಾಯಕಿ ರೂಪಿಕಾ ಮಾತನಾಡಿ ತಾವು ಚಿತ್ರದಲ್ಲಿ ಅವಿನಾಶ್ ಮತ್ತು ಸಂಗೀತಾರ ಪುತ್ರಿಯಾಗಿದ್ದುಕೊಂಡು, ಸಂಗೀತದ ಆರಾಧಕಿಯಾಗಿರುತ್ತೇನೆ ಎಂದರು. ಶೀರ್ಷಿಕೆ ಆ ತರಹ ಇದ್ದರೂ ಇದು ಕುಟುಂಬಕ್ಕೆ ಒತ್ತು ಕೊಡುವಂಥ ಚಿತ್ರ.ಚಿತ್ರದಲ್ಲಿ ಮೂರು ವಿಧದ ಲೈಫ್ ಸ್ಟೈಲ್ ಇರುವವರನ್ನು ತೋರಿಸಲಾಗಿದೆ ಎಂದರು.

ನಟಿ ಸಂಗೀತಾ ಮಾತನಾಡಿ, " ಚಿತ್ರದಲ್ಲಿ ಎಲ್ಲಿಯೂ‌ ಡಬಲ್ ಮೀನಿಂಗ್ ಇಲ್ಲ, ಫಸ್ಟ್ ಕ್ಲಾಸ್ ಕಲಾವಿದರನ್ನು ಒಳಗೊಂಡ ಚಿತ್ರ. ಅಪ್ಪನ ಜತೆಗೆ ಆತ್ಮೀಯ ಆಗಿದ್ದರೂ ತಾಯಿಯೊಂದಿಗೆ ಮಗಳ ಸೆಂಟಿಮೆಂಟ್ ದೃಶ್ಯಗಳಿರುತ್ತವೆ. ನಿರ್ದೇಶಕ ಅಶೋಕ್ ಅಸೋಸಿಯೇಟಾಗಿದ್ದಲೇ ನನಗೆ ಪರಿಚಯ.‌ ಒಳ್ಳೆಯ ನಿರ್ದೇಶಕರು. ‌ಶ್ರಮಜೀವಿ ಚೆನ್ನಾಗಿ ಚಿತ್ರ ಮಾಡಿದ್ದಾರೆ" ಎಂದರು.

ಮಜಾ ಟಾಕೀಸ್ ಪವನ್ ಮಾತನಾಡಿ ಗ್ಯಾರೇಜ್ ನಲ್ಲಿನ ಮುಸ್ಲಿಂ ಹುಡುಗನ ಪಾತ್ರ ನನ್ನದು. ನಗಿಸುವಂಥ ಪಾತ್ರ ಎಂದು ತಿಳಿಸಿದರು.
ಚಿತ್ರಕ್ಕೆ ಸಂಭಾಷಣೆ ಬರೆದಿರುವ ರಾಜು , ಮಾಸ್ತಿಗುಡಿ ಚಿತ್ರದಲ್ಲಿ ದುರಂತ ಅಂತ್ಯ ಕಂಡ ನಟ ಉದಯ್ ನ ಬಾವ. ತಾವು  ಖಳನಾಯಕನ ಪಾತ್ರದಲ್ಲಿಯೂ‌ ಕಾಣಿಸಿಕೊಂಡಿರುವುದಾಗಿ ಅವರು ಹೇಳಿದರು. ಚಿತ್ರದ ಸಾಹಸ ನಿರ್ದೇಶಕ ಮಾಸ್ ಮಾದ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News