×
Ad

ಯಮನ್‌ನಿಂದ ಸೌದಿಯತ್ತ ಧಾವಿಸುತ್ತಿದ್ದ ಕ್ಷಿಪಣಿ ನಾಶ

Update: 2017-12-01 22:24 IST

ಜಿದ್ದಾ, ಡಿ. 1: ಸೌದಿ ಅರೇಬಿಯದ ದಕ್ಷಿಣದ ನಗರ ಖಾಮಿಸ್ ಮುಶೈಟ್‌ನತ್ತ ಧಾವಿಸುತ್ತಿದ್ದ ಕ್ಷಿಪಣಿಯೊಂದನ್ನು ಸೌದಿ ವಾಯು ರಕ್ಷಣಾ ವ್ಯವಸ್ಥೆಯು ಹೊಡೆದುರುಳಿಸಿರುವುದಾಗಿ ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.

ಗುರುವಾರ ರಾತ್ರಿ 8:20ಕ್ಕೆ ಯಮನ್ ಭೂಭಾಗದೊಳಗಿನಿಂದ ಕ್ಷಿಪಣಿಯೊಂದು ಹಾರಿದುದನ್ನು ಸೌದಿ ರಾಯಲ್ ಏರ್ ಫೋರ್ಸ್ ಪತ್ತೆಹಚ್ಚಿತು ಹಾಗೂ ಅದನ್ನು ನಾಶಪಡಿಸಿತು ಎಂದು ಯಮನ್‌ನಲ್ಲಿ ಬಂಡುಕೋರರ ವಿರುದ್ಧ ಹೋರಾಡುತ್ತಿರುವ ಸೌದಿ ಅರೇಬಿಯ ನೇತೃತ್ವದ ಮಿತ್ರಪಡೆಯ ವಕ್ತಾರ ಕರ್ನಲ್ ತುರ್ಕಿ ಅಲ್-ಮಾಲಿಕಿ ತಿಳಿಸಿದರು.

ಕಳೆದ ತಿಂಗಳು, ಯಮನ್‌ನಿಂದ ರಿಯಾದ್‌ನತ್ತ ಧಾವಿಸಿ ಬರುತ್ತಿದ್ದ ಕ್ಷಿಪಣಿಯೊಂದನ್ನು ಸೌದಿ ರಕ್ಷಣಾ ವ್ಯವಸ್ಥೆ ಅರ್ಧದಲ್ಲೇ ತುಂಡರಿಸಿತ್ತು. ಆ ಬಳಿಕ, ಹೊರಗಿನ ಶಸ್ತ್ರಾಸ್ತ್ರಗಳು ಯಮನ್‌ಗೆ ಬರದಂತೆ ತಡೆಯುವುದಕ್ಕಾಗಿ ಯಮನ್‌ನ ವಿಮಾನ ನಿಲ್ದಾಣ, ಬಂದರು ಮತ್ತು ಇತರ ಒಳಪ್ರವೇಶದ ದ್ವಾರಗಳನ್ನು ಮುಚ್ಚಲಾಗಿತ್ತು. ದಿಗ್ಬಂಧನವನ್ನು ಇತ್ತೀಚೆಗಷ್ಟೇ ತೆರವುಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News