ಅಜಿತ್ ವಿಶ್ವಾಸಂ

Update: 2017-12-02 11:15 GMT

‘ವೇದಾಲಂ’, ‘ವಿವೇಗಂ’ ಬಳಿಕ ನಿರ್ದೇಶಕ ಶಿವಾ ಅವರು ಸತತ ಮೂರನೇ ಬಾರಿಗೆ ಅಜಿತ್ ಚಿತ್ರಕ್ಕೆ ಆ್ಯಕ್ಷನ್‌ಕಟ್ ಹೇಳುತ್ತಿದ್ದಾರೆ. ಅಜಿತ್ ಅಭಿನಯದ 58ನೇ ಚಿತ್ರವಾದ್ದರಿಂದ ಅದಕ್ಕೆ ತಾತ್ಕಾಲಿಕವಾಗಿ ತಲ 58. ಆದರೆ ಈಗ ಕೊನೆಗೂ ನಿರ್ದೇಶಕ ಶಿವಾ ಚಿತ್ರದ ಹೆಸರನ್ನು ಅಂತಿಮಗೊಳಿಸಿದ್ದು, ‘ವಿಶ್ವಾಸಂ’ ಎಂದು ಹೆಸರಿಟ್ಟಿದ್ದಾರೆ.

ಭಾರೀ ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ ‘ವಿಶ್ವಾಸಂ’ ಮುಂದಿನ ವರ್ಷದ ಜನವರಿಯಲ್ಲಿ ಚಿತ್ರೀಕರಣ ಆರಂಭಿಸುವ ಯೋಜನೆಯಿದೆ ಹಾಗೂ ದೀಪಾವಳಿ ಹೊತ್ತಿಗೆ ಚಿತ್ರವನ್ನು ಬಿಡು ಗಡೆಗೊಳಿಸುವ ಪ್ಲಾನ್ ಮಾಡಿದ್ದಾರೆ ಶಿವಂ.

ಸತ್ಯಜ್ಯೋತಿ ಬ್ಯಾನರ್‌ನಲ್ಲಿ ನಿರ್ಮಾಣಗೊಳ್ಳಲಿರುವ ಈ ಚಿತ್ರದ ನಾಯಕಿ ಯಾರೆಂದು ಖಚಿತವಾಗಿಲ್ಲ. ಬಾಲಿವುಡ್ ಖ್ಯಾತ ನಟಿಯೊಬ್ಬರು ಆಯ್ಕೆಯಾಗುವ ಸಾಧ್ಯತೆಯೂ ಇಲ್ಲದಿಲ್ಲವೆಂದು ಚಿತ್ರತಂಡದ ಅಂಬೋಣ.

ಅಪಾರ ನಿರೀಕ್ಷೆಗಳ ನಡುವೆ ಅಜಿತ್-ಶಿವಾ ಕಾಂಬಿನೇಶನ್‌ನ ‘ವಿವೇಗಂ’ ಈ ವರ್ಷದ ಆಗಸ್ಟ್‌ನಲ್ಲಿ ತೆರೆ ಕಂಡಿತ್ತು. ಬಿಡುಗಡೆಯ ನಂತರ ಚಿತ್ರದ ಬಗ್ಗೆ ವಿಮರ್ಶಕರಿಂದ ಮಿಶ್ರಪ್ರತಿಕ್ರಿಯೆಗಳು ವ್ಯಕ್ತವಾದರೂ, ಬಾಕ್ಸ್‌ಆಫೀಸ್ ಕೊಳ್ಳೆಹೊಡೆ ಯುವಲ್ಲಿ ಯಶಸ್ವಿಯಾಗಿದೆ. ಇದೀಗ ವಿಶ್ವಾಸಂ, ಅಜಿತ್-ಶಿವಾ ಜೋಡಿಯ ಗೆಲುವಿನ ಸರಮಾಲೆಯನ್ನು ಮುಂದುವರಿಸಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News