ರಿಲೀಸ್ ಗೆ ಮುನ್ನವೇ ಬಳೆಕೆಂಪಗೆ ಪ್ರಶಸ್ತಿ

Update: 2017-12-02 11:18 GMT

‘ತಿಥಿ’ ಇಡೀ ಭಾರತೀಯ ಚಿತ್ರ ರಂಗವೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದ ಚಿತ್ರ. ಪ್ರೇಕ್ಷಕರಿಂದಲೂ, ವಿಮರ್ಶಕರಿಂದಲೂ ಮುಕ್ತಕಂಠದ ಪ್ರಶಂಸೆ ಪಡೆದ ತಿಥಿ, ಬಾಕ್ಸ್‌ಆಫೀಸ್‌ನಲ್ಲಿ ಯಶಸ್ಸು ಕಂಡಿತ್ತು. ಈ ಚಿತ್ರಕ್ಕೆ ಸ್ಕ್ರಿಪ್ಟ್ ಬರೆದಿದ್ದ ಈರೇಗೌಡ ಇದೀಗ ‘ಬಳೆಕೆಂಪ’ ಚಿತ್ರದ ಮೂಲಕ ನಿರ್ದೇಶಕರೂ ಆಗುತ್ತಿದ್ದಾರೆ. ಈ ನಡುವೆ ಅವರು ಮಾತ್ರವಲ್ಲ, ಇಡೀ ಸ್ಯಾಂಡಲ್‌ವುಡ್ ಸಂತಸಪಡುವ ಸುದ್ದಿಬಂದಿದೆ. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಐಎಫ್‌ಡಿಸಿ) ಕೊಡಮಾಡುವ ವರ್ಕ್ ಇನ್ ಪ್ರೊಗ್ರೆಸ್ ಪ್ರಶಸ್ತಿಯು ‘ಬಳೆಕೆಂಪ’ಕ್ಕೆ ದೊರೆತಿದೆ. ಚಿತ್ರಗಳು ಸಂಕಲನ ಹಂತಕ್ಕೊಳಗಾಗುವ ಮುನ್ನ ಅವುಗಳನ್ನು ಸ್ಪರ್ಧೆಗೆ ಆಹ್ವಾನಿಸಲಾಗುತ್ತದೆ. ಅಂತಾರಾಷ್ಟ್ರೀಯ ತೀರ್ಪುಗಾರ ಮಂಡಳಿ ಆಯ್ದ ಚಿತ್ರಗಳನ್ನು ವೀಕ್ಷಿಸಿ ಪ್ರಶಸ್ತಿಗೆ ಆಯ್ಕೆ ಮಾಡುತ್ತವೆ. ಇಂತಹದ್ದೊಂದು ವಿಶಿಷ್ಟ ಪ್ರಶಸ್ತಿ ‘ಬಳೆಕೆಂಪ’ಗೆ ದೊರೆತಿರುವುದು, ಕನ್ನಡಕ್ಕೆ ಹೆಮ್ಮೆಯ ವಿಷಯವೇ ಸರಿ. ಒಟ್ಟಿನಲ್ಲಿ ಚಿತ್ರೀಕರಣ ಹಂತದಲ್ಲೇ ಪ್ರಶಸ್ತಿಯನ್ನು ಬಾಚಿಕೊಂಡಿರುವ ‘ಬಳೆಕೆಂಪ’ ಬಿಡುಗಡೆಯ ಬಳಿಕವೂ ಪ್ರೇಕ್ಷಕರ ಮನಗೆಲ್ಲುವುದರಲ್ಲಿ ಸಂದೇಹವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News