ಡ್ಯೂಪ್ ಇಲ್ಲದೆ ತ್ರಿಶಾ ಸ್ಟಂಟ್

Update: 2017-12-02 11:51 GMT

ನಾಯಕನಟರು ಮಾತ್ರವಲ್ಲ ಹೀರೋಯಿನ್‌ಗಳು ಕೂಡಾ ಡ್ಯೂಪ್ ಇಲ್ಲದೆ ಸಾಹಸ ದೃಶ್ಯಗಳಲ್ಲಿ ಅಭಿನಯಿಸಬಲ್ಲರೆಂಬುದನ್ನು ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಪ್ರೂವ್ ಮಾಡಿದ್ದಾರೆ. ತಿರುಘ್ನನ್ ನಿರ್ದೇಶನದ ತಮಿಳು ಚಿತ್ರ ‘ಪರಮಪದಂ ವಿಳಯಾಟ್ಟ್’ನಲ್ಲಿ ನಾಯಕನಟಿ ತ್ರಿಶಾ, ಡ್ಯೂಪ್ ಇಲ್ಲದೆ ಆ್ಯಕ್ಷನ್‌ದೃಶ್ಯವೊಂದನ್ನು ನಿರ್ವಹಿಸಿದ್ದಾರಂತೆ.

ಈ ಚಿತ್ರದಲ್ಲಿ ತೃಷಾ ವೈದ್ಯೆ ಯಾಗಿ ಕಾಣಿಸಿಕೊಂಡಿದ್ದಾರೆ. ವೈದ್ಯರ ತಂಡವೊಂದನ್ನು, ದುಷ್ಕರ್ಮಿಗಳ ತಂಡವೊಂದು ಅಪಹರಿಸುತ್ತದೆ. ಅವರಿಂದ ಪಾರಾಗಲು ಆ ವೈದ್ಯರು ನಡೆಸುವ ಪ್ರಯತ್ನಗಳ ಕುರಿತಾದ ಕಥಾವಸ್ತುವನ್ನು ಚಿತ್ರ ಒಳಗೊಂಡಿದೆ.

 ಅಪ್ಪಟ ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾದ ‘ಪರಮಪದ’ ಕಥೆಯನ್ನು ಕೇಳಿದ ಕೂಡಲೇ ತ್ರಿಶಾ ಹಿಂದೆ ಮುಂದೆ ನೋಡದೆ ಓ.ಕೆ. ಅಂದಿದ್ದಾರಂತೆ. ಚಿತ್ರದ ಮೊದಲ ಶೆಡ್ಯೂಲ್ ಕೇರಳದ ಎರಕ್ಕಾಡ್‌ನಲ್ಲಿರುವ ದಟ್ಟಾರಣ್ಯದಲ್ಲಿ ನಡೆಯಲಿದೆ.

ತಮಿಳು, ತೆಲುಗಿನಲ್ಲಿ ಹಲವಾರು ಸಾಹಸದೃಶ್ಯಗಳನ್ನು ಸಂಯೋಜಿಸಿರುವ ಸ್ಟನ್ನರ್ ಶ್ಯಾಮ್ ಈ ಚಿತ್ರಕ್ಕೂ ಸಾಹಸ ನಿರ್ದೇಶನ ಮಾಡಿದ್ದಾರೆ. ತ್ರಿಶಾ ಅಭಿನಯದ ದೃಶ್ಯವೊಂದರಲ್ಲಿ ಡ್ಯೂಪ್ ಅನ್ನು ಬಳಸುವ ಬಗ್ಗೆ ಶ್ಯಾಮ್ ಪ್ರಸ್ತಾಪಿಸಿದಾಗ, ತಾನೇ ಮಾಡಬಲ್ಲೆ ಎಂದು ತ್ರಿಶಾ ಮುಂದೆ ಬಂದಿದ್ದರು. ಅಲ್ಲದೆ ಆ ದೃಶ್ಯವನ್ನು ಅದ್ಭುತವಾಗಿ ನಿರ್ವಹಿಸಿದ ಬಳಿಕ ಇಡೀ ಚಿತ್ರತಂಡ ತೃಶಾರನ್ನು ಮುಕ್ತಕಂಠದಿಂದ ಪ್ರಶಂಸಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News