ತಮಿಳುನಾಡಿನ 20 ಮೀನುಗಾರರನ್ನು ಬಂಧಿಸಿದ ಲಂಕಾ ನೌಕಾಪಡೆ
Update: 2017-12-02 19:37 IST
ರಾಮೇಶ್ವರಂ, ಡಿ.2: ತಮಿಳುನಾಡಿನ ನಾಗಪಟ್ಟಿಣಂ ಜಿಲ್ಲೆಯ 20 ಮೀನುಗಾರರನ್ನು ಶ್ರೀಲಂಕಾದ ನೌಕಾಪಡೆ ಬಂಧಿಸಿದ್ದು , ಮೀನುಗಾರಿಕೆಗೆ ಬಳಸುತ್ತಿದ್ದ 2 ಬೋಟುಗಳನ್ನೂ ವಶಕ್ಕೆ ಪಡೆದಿದ್ದಾರೆ ಎಂದು ನಾಗಪಟ್ಟಿಣಂನ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಗಂಗಾಧರ್ ತಿಳಿಸಿದ್ದಾರೆ.
ಬಂಧನದ ಸಂದರ್ಭ ಈ ಮೀನುಗಾರರು ಶ್ರೀಲಂಕಾ ಕಡಲ ವ್ಯಾಪ್ತಿಯ ನೆಡುಂಥೀವು ಎಂಬಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು ಎಂದು ಆರೋಪಿಸಿದ ಲಂಕಾ ನೌಕಾಪಡೆ ಬೋಟುಗಳ ಸಹಿತ ಮೀನುಗಾರರನ್ನು ಶ್ರೀಲಂಕಾದ ಪರುತಿಥುರೈಗೆ ಕೊಂಡೊಯ್ದಿದ್ದಾರೆ ಎಂದವರು ತಿಳಿಸಿದ್ದಾರೆ. ನ.19ರಂದು ಮಂಡಪಂ ಮತ್ತು ರಾಮೇಶ್ವರಂನ 8 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿತ್ತು.