×
Ad

ಜೀವಂತ ಮಗುವನ್ನು ‘ಮೃತ’ ಎಂದು ಘೋಷಣೆ: ಆಸ್ಪತ್ರೆಯ ಲೈಸೆನ್ಸ್ ರದ್ದಾಗುವ ಸಾಧ್ಯತೆ

Update: 2017-12-02 19:53 IST

ಹೊಸದಿಲ್ಲಿ, ಡಿ.2: ಜೀವಂತ ಮಗುವೊಂದನ್ನು ‘ಮೃತ’ ಎಂದು ಘೋಷಿಸಿದ್ದ ದಿಲ್ಲಿ ಪ್ರತಿಷ್ಠಿತ ಆಸ್ಪತ್ರೆಯ ತಪ್ಪು ಸಾಬೀತಾದಲ್ಲಿ ಆಸ್ಪತ್ರೆಯ ಲೈಸೆನ್ಸ್ ರದ್ದಾಗುವ ಸಾಧ್ಯತೆ ಇದೆ ಎಂದು ದಿಲ್ಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ.

ಸೋಮವಾರ ಸಂಜೆ ಪ್ರಾಥಮಿಕ ವರದಿ ಸಿಗುವ ಸಾಧ್ಯತೆಯಿದ್ದು, ಆರೋಗ್ಯ ಇಲಾಖೆ ವಾರದೊಳಗೆ ಈ ಬಗ್ಗೆ ಸಮಗ್ರ ಮಾಹಿತಿ ನೀಡಲಿದೆ ಎಂದು ಸಚಿವರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ತನಿಖೆಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆದೇಶಿಸಿದ್ದಾರೆ.

ದಿಲ್ಲಿಯ ಶಾಲಿಮಾರ್ ಬಾಘ್ ನ ಮ್ಯಾಕ್ಸ್ ಆಸ್ಪತ್ರೆ ಇಬ್ಬರು ಅವಳಿ ಮಕ್ಕಳು ಮಕ್ಕಳು ಮೃತಪಟ್ಟಿರುವುದಾಗಿ ಘೋಷಿಸಿತ್ತು. ಆದರೆ ಈ ಪೈಕಿ ಒಂದು ಮಗು ಜೀವಂತವಿತ್ತು.

“ಕೊರಿಯರ್ ಪ್ಯಾಕ್ ನಲ್ಲಿ ನೀಡುವಂತೆ ಅವರು ಮಕ್ಕಳನ್ನು ನೀಡಿದರು. ಆಸ್ಪತ್ರೆಯಿಂದ 3 ಕಿ.ಮೀ,. ದೂರ ಸಾಗಿದ ನಂತರ ಒಂದು ಲಕೋಟೆಯಲ್ಲಿ ಚಲನೆ ಕಂಡುಬಂತು. ಕೂಡಲೇ ಅದನ್ನು ಪರಿಶೀಲಿಸಿದಾಗ ಮಗು ಉಸಿರಾಡುತ್ತಿತ್ತು” ಎಂದು ಮಗುವಿನ ಅಜ್ಜ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News