×
Ad

ಬಾಲಿ ವಿಮಾನ ನಿಲ್ದಾಣದಲ್ಲಿ ಹಾರಾಟ ಸ್ಥಗಿತ

Update: 2017-12-02 22:38 IST

ಡೆನ್ಪಸರ್ (ಇಂಡೋನೇಶ್ಯ), ಡಿ. 2: ಇಂಡೋನೇಶ್ಯದ ಪ್ರವಾಸಿ ದ್ವೀಪ ಬಾಲಿಯಲ್ಲಿರುವ ಅಗ್ನಿಪರ್ವತ ವೌಂಟ್ ಅಗಂಗ್‌ನಿಂದ ಬೂದಿ ಮಿಶ್ರಿತ ಹೊಗೆ ಹೊರಸೂಸುವುದು ತೀವ್ರಗೊಂಡ ಹಿನ್ನೆಲೆಯಲ್ಲಿ, ಶನಿವಾರ ಬಾಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಹೋಗುವ ಕೆಲವು ವಿಮಾನಗಳನ್ನು ರದ್ದುಪಡಿಸಲಾಗಿದೆ.

ವಿಮಾನ ನಿಲ್ದಾಣ ಈಗಲೂ ಸಾಮಾನ್ಯ ರೀತಿಯಲ್ಲೇ ಕಾರ್ಯನಿರ್ವಹಿಸುತ್ತಿದೆ, ಆದರೆ ಕೆಲವು ವಿಮಾನಯಾನ ಕಂಪೆನಿಗಳು ತಮ್ಮ ವಿಮಾನಗಳ ಹಾರಾಟವನ್ನು ರದ್ದುಪಡಿಸಿವೆ ಎಂದು ವಿಮಾನ ನಿಲ್ದಾಣದ ವಕ್ತಾರರೊಬ್ಬರು ಹೇಳಿದರು.

ಜ್ವಾಲಾಮುಖಿಯಿಂದ ಬೂದಿ ಮಿಶ್ರಿತ ಹೊಗೆ ಹೊರಸೂಸುತ್ತಿರುವ ಹಿನ್ನೆಲೆಯಲ್ಲಿ ಈ ವಾರದ ಹೆಚ್ಚಿನ ಅವಧಿಯಲ್ಲಿ ವಿಮಾನ ನಿಲ್ದಾಣ ಮುಚ್ಚಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News