ಅತ್ಯಾಚಾರಕ್ಕೆ ಮರಣದಂಡನೆ ಶಿಕ್ಷೆ: ವಿಧೇಯಕಕ್ಕೆ ಮ.ಪ್ರದೇಶ ವಿಧಾನಸಭೆಯಿಂದ ಅಂಗೀಕಾರ

Update: 2017-12-04 13:41 GMT

ಮಧ್ಯಪ್ರದೇಶ, ಡಿ.4: ಹನ್ನೆರಡು ಅಥವಾ ಅದಕ್ಕಿಂತ ಕೆಳಗಿನ ವಯಸ್ಸಿನವರ ಮೇಲೆ ಅತ್ಯಾಚಾರ ಎಸಗಿದವರಿಗೆ ಮರಣದಂಡನೆ ವಿಧಿಸುವ ವಿಧೇಯಕವನ್ನು ಮಧ್ಯಪ್ರದೇಶ ವಿಧಾನಸಭೆ ಅಂಗೀಕರಿಸಿದೆ.

ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸಚಿವ ಸಂಪುಟವು ಸಾರ್ವಜನಿಕ ಸುರಕ್ಷತಾ ಮಸೂದೆಗೆ ತಿದ್ದುಪಡಿಗಳನ್ನು ಅನುಮೋದಿಸಿದ ಒಂದು ವಾರದ ನಂತರ ಈ ವಿಧೇಯಕವನ್ನು ಅಂಗೀಕರಿಸಲಾಗಿದೆ.

ಅನುಮೋದನೆಗಾಗಿ ವಿಧೇಯಕವನ್ನು ಕೇಂದ್ರ ಸರಕಾರ ಹಾಗು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಕಳುಹಿಸಿಕೊಡಲಾಗಿದೆ. 12 ಅಥವಾ ಅದಕ್ಕಿಂತ ಕೆಳಗಿನ ವಯಸ್ಸಿನವರ ಮೇಲೆ ಅತ್ಯಾಚಾರ ಎಸಗಿದವರಿಗೆ ಕನಿಷ್ಠ 14 ವರ್ಷ ಜೈಲು ಅಥವಾ ಜೀವಾವಧಿ ಅಥವಾ ಮರಣದಂಡನೆ ವಿಧಿಸುವ ಅವಕಾಶ ವಿಧೇಯಕದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News