×
Ad

ಪ್ರತಾಪ್ ಸಿಂಹ ಒಬ್ಬ ಹುಚ್ಚ, ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಿ : ಸಚಿವ ವಿನಯ್ ಕುಲಕರ್ಣಿ

Update: 2017-12-04 19:14 IST

ಧಾರವಾಡ, ಡಿ. 4: ಮೈಸೂರಿನ ಸಂಸದ ಪ್ರತಾಪ್ ಸಿಂಹ ಒಬ್ಬ ಹುಚ್ಚ. ಬಿಜೆಪಿಯವರು ಮೊದಲು ಆತನನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್ ಕುಲಕರ್ಣಿ ಟೀಕಿಸಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪ್ರತಾಪ್ ಸಿಂಹ ಅವರ ವ್ಯಕ್ತಿತ್ವ ರಾಜ್ಯದ ಜನತೆಗೆ ತಿಳಿಯುತ್ತಿದೆ. ವೀರ ವನಿತೆ ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮಗೆ ಅವಮಾನ ಮಾಡಿದಾಗ ಬಿಜೆಪಿ ನಾಯಕರಾರು ಚಕಾರ ಎತ್ತಿಲ್ಲ.

ಬೇರೆ ಪಕ್ಷದವರೇನಾದರೂ ಈ ತರದ ಹೇಳಿಕೆ ನೀಡಿದಿದ್ದರೆ ಇಷ್ಟೊತ್ತಿಗೆ ಅವರ ವಿರುದ್ಧ ಮುತ್ತಿಗೆ, ಪ್ರತಿಭಟನೆಗಳನ್ನು ಬಿಜೆಪಿಯವರು ಮಾಡುತ್ತಿದ್ದರು. ಆದರೆ, ಇದೀಗ ಸಂಸದ ಪ್ರಹ್ಲಾದ್ ಜೋಷಿಯವರು ತುಟಿ ಬಿಚ್ಚುತ್ತಿಲ್ಲ. ಹಿರಿಯ ಸಂಶೋಧಕ ಡಾ. ಕಲಬುರ್ಗಿ ಅವರ ಹತ್ಯೆಯಾದಾಗಲೂ ಬಿಜೆಪಿ ಮಾತನಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಮನಸೋ ಇಚ್ಛೆ ವರ್ತಿಸುತ್ತಿದ್ದಾರೆ. ಹನುಮ ಜಯಂತಿ, ದತ್ತ ಜಯಂತಿ ನೆಪದಲ್ಲಿ ಬಿಜೆಪಿ ಮುಖಂಡರು ರಾಜ್ಯದಲ್ಲಿ ಸಾಮರಸ್ಯ ಕದಡುವ ಷಡ್ಯಂತ್ರವನ್ನು ನಡೆಸಿದ್ದಾರೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News