ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳಲ್ಲಿ ತಾಜ್‌ಮಹಲ್‌ಗೆ ಎರಡನೇ ಸ್ಥಾನ
ಹೊಸದಿಲ್ಲಿ,ಡಿ.6: ಭಾರತದ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ತಾಜ್‌ಮಹಲ್ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪೈಕಿ ಎರಡನೇ ಅತ್ಯುತ್ತಮ ತಾಣವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರತಿ ವರ್ಷ 80 ಲಕ್ಷಕ್ಕೂ ಅಧಿಕ ಪ್ರವಾಸಿಗಳು ಭೇಟಿ ನೀಡುವ, ಮೊಘಲ್ ಚಕ್ರವರ್ತಿ ಶಾಹಜಹಾನ್ ತನ್ನ ಪತ್ನಿ ಮುಮ್ತಾಜ್ ಮಹಲ್ ನೆನಪಿನಲ್ಲಿ ನಿರ್ಮಿಸಿರುವ ಈ ಪ್ರೇಮ ಸ್ಮಾರಕವು ವಿಶ್ವ ಪಾರಂಪರಿಕ ತಾಣಗಳಲ್ಲಿ ಕಾಂಬೋಡಿಯಾದ ಆಂಗ್‌ಕೋರ್ ವಾಟ್‌ನ ನಂತರ ಅತ್ಯುತ್ತಮ ಪ್ರವಾಸಿ ತಾಣವಾಗಿ ಮೂಡಿಬಂದಿದೆ.
ಆನ್‌ಲೈನ್ ಟ್ರಾವೆಲ್ ಪೋರ್ಟಲ್ ಟ್ರಿಪ್ ಅಡ್ವೈಸರ್ ನಡೆಸಿರುವ ಸಮೀಕ್ಷೆಯು ವಿಶ್ವಾದ್ಯಂತದ ಪ್ರವಾಸಿಗಳ ಅಭಿಪ್ರಾಯಗಳನ್ನು ಆಧರಿಸಿ ಅತ್ಯುತ್ತಮ ಯನೆಸ್ಕೋದ ಸಾಂಸ್ಕೃತಿಕ ಮತ್ತು ನೈಸರ್ಗಿಕ ತಾಣಗಳನ್ನು ಪಟ್ಟಿ ಮಾಡುತ್ತದೆ.
ಮಾರ್ಗದರ್ಶಿಯೊಂದಿಗೆ ಖಾಸಗಿ ಪ್ರವಾಸ ಮತ್ತು ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯಗಳಲ್ಲಿ ಸ್ಮಾರಕಕ್ಕೆ ಭೇಟಿಯಿಂದ ಹಿಡಿದು ಆಗ್ರಾದ ಸ್ಥಳೀಯ ಮನೆಯಲ್ಲಿ ಊಟ ಸೇರಿದಂತೆ ಭೇಟಿಯವರೆಗೆ ಈ ಮೈಮರೆಸುವ ತಾಣಕ್ಕೆ ಭೇಟಿ ನೀಡಲು ನೂರಾರು ಪ್ರವಾಸ ವಿಧಾನಗಳ ಆಯ್ಕೆಗಳಿವೆ ಮತ್ತು ಅಪೂರ್ವ ಅನುಭವಗಳನ್ನು ಪಡೆಯಬಹುದಾಗಿದೆ ಎಂದು ಟ್ರಿಪ್ ಅಡ್ವೈಸರ್ ಹೇಳಿದೆ.
ಚೀನಾದ ಮಹಾಗೋಡೆ, ಪೆರುವಿನ ಮಾಚು ಪಿಚು, ಬ್ರಝಿಲ್‌ನ ಇಗ್ವಾಝು ರಾಷ್ಟ್ರೀಯ ಉದ್ಯಾನವನ, ಇಟಲಿಯ ಸಸ್ಸಿ ಆಫ್ ಮಾಟೇರಾ, ಪೋಲಂಡ್‌ನ ಆಷ್ಚ್‌ವಿಜ್ ಬಿರ್ಕೆನಾ ಮತ್ತು ಐತಿಹಾಸಿಕ ಕ್ರಾಕೋ, ಇಸ್ರೇಲ್‌ನ ಹಳೆಯ ಜೆರುಸಲೇಂ ನಗರ,ಟರ್ಕಿಯ ಇಸ್ತಾಂಬುಲ್‌ನ ಐತಿಹಾಸಿಕ ಪ್ರದೇಶಗಳೂ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.