ಜಾತ್ಯಾತೀತ ವಾತಾವರಣದಲ್ಲಿ ರಕ್ಷಣಾ ಪಡೆಗಳಿಂದ ಅತ್ಯುತ್ತಮ ಕಾರ್ಯ ನಿರ್ವಹಣೆ: ಜ.ರಾವತ್

Update: 2017-12-06 16:10 GMT

ಹೊಸದಿಲ್ಲಿ,ಡಿ.6: ಸೇನೆಯ ರಾಜಕೀಕರಣ ಕುರಿತು ಕಳವಳ ವ್ಯಕ್ತಪಡಿಸಿದ ಭೂಸೇನೆಯ ಮುಖ್ಯಸ್ಥ ಜ.ಬಿಪಿನ್ ರಾವತ್, ರಕ್ಷಣಾ ಪಡೆಗಳು ಜಾತ್ಯಾತೀತ ವಾತಾವರಣದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ ಮತ್ತು ಏನಾದರೂ ಮಾಡಿ ಅವುಗಳನ್ನು ರಾಜಕೀಯದಿಂದ ದೂರವಿರಿಸಬೇಕು ಎಂದು ಸ್ಪಷ್ಟಪಡಿಸಿದರು.

 ಯುನೈಟೆಡ್ ಸರ್ವಿಸ್ ಇನ್‌ಸ್ಟಿಟ್ಯೂಷನ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಉಜ್ವಲ ಪ್ರಜಾಪ್ರಭುತ್ವಕ್ಕಾಗಿ ಸೇನೆಯು ರಾಜಕೀಯದಿಂದ ದೂರವಿರುವುದು ಅಗತ್ಯವಾಗಿದೆ. ಸೇನೆಯ ರಾಜಕೀಕರಣವನ್ನು ನಾವು ಇತ್ತೀಚಿನ ದಿನಗಳಲ್ಲಿ ನೋಡುತ್ತಿದ್ದೇವೆ. ನಾವು ಅತ್ಯಂತ ಜಾತ್ಯಾತೀತ ವಾತಾವರಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ನಾನು ಭಾವಿಸಿದ್ದೇನೆ. ನಮ್ಮದು ಉಜ್ವಲ ಪ್ರಜಾಪ್ರಭುತ್ವ ವಾಗಿದ್ದು, ಇಲ್ಲಿ ಸೇನೆಯು ರಾಜಕೀಯದಿಂದ ಸದಾ ದೂರವಿರಬೇಕು ಎಂದು ಹೇಳಿದರು.

‘ಹಿಂದಿನ ಒಳ್ಳೆಯ ದಿನಗಳಲ್ಲಿ’ ಮಹಿಳೆಯರು ಮತ್ತು ರಾಜಕೀಯದ ಕುರಿತು ಸಶಸ್ತ್ರ ಪಡೆಗಳಲ್ಲಿ ಚರ್ಚೆ ನಡೆಯಬಾರದು ಎನ್ನುವುದು ನಿಯಮದಂತಿತ್ತು. ಆದರೆ ಈಗ ಈ ವಿಷಯಗಳು ಮಾತುಕತೆಗಳಲ್ಲಿ ನುಸುಳುತ್ತಿವೆ ಮತ್ತು ಇದನ್ನು ನಿವಾರಿಸಬೇಕಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News