ಪತಿಯನ್ನು ಕೊಂದು 13 ವರ್ಷ ಸೆಪ್ಟಿಕ್ ಟ್ಯಾಂಕ್‌ನಲ್ಲಿಟ್ಟ ಮಹಿಳೆ

Update: 2017-12-07 14:46 GMT

ಮುಂಬೈ, ಡಿ.7: ಪತಿಯನ್ನು ಕೊಂದ ಮಹಿಳೆಯೊಬ್ಬಳು ಆತನ ದೇಹವನ್ನು ಶೌಚಾಲಯದ ಗುಂಡಿಯಲ್ಲಿ ಹಾಕಿದ್ದ ಘಟನೆ 13 ವರ್ಷದ ಬಳಿಕ ಬೆಳಕಿಗೆ ಬಂದಿದೆ. ಮುಂಬೈಯ ಗಾಂಧಿಪದ ಎಂಬಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಬೊಯ್‌ಸರ್ ಠಾಣೆಯ ಪೊಲೀಸರು 43 ವರ್ಷದ ಫರೀದಾ ಎಂಬ ಮಹಿಳೆಯ ಮನೆಗೆ ದಾಳಿ ನಡೆಸಿ ನಾಲ್ವರು ಮಹಿಳೆಯರನ್ನು ವೇಶ್ಯಾವಾಟಿಕೆ ಜಾಲದಿಂದ ರಕ್ಷಿಸಿ, ಫರೀದಾ ಹಾಗೂ ಮನೆಯಲ್ಲಿದ್ದ ಓರ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

 ಆದರೆ ಫರೀದಾ ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದ ಜೊತೆಯಲ್ಲೇ ತನ್ನ ಪತಿಯೂ ಸೇರಿದಂತೆ ಹಲವರ ಕೊಲೆಯನ್ನೂ ನಡೆಸಿದ್ದಾಳೆ ಎಂಬ ಮಾಹಿತಿ ದೊರೆತ ಬಳಿಕ ಮತ್ತೊಮ್ಮೆ ಮನೆಯ ಮೇಲೆ ದಾಳಿ ನಡೆಸಿದಾಗ ಶೌಚಾಲಯದ ಸೆಪ್ಟಿಕ್ ಟ್ಯಾಂಕ್‌ನಲ್ಲಿ ವ್ಯಕ್ತಿಯೊಬ್ಬನ ಅಸ್ತಿಪಂಜರ ಪತ್ತೆಯಾಗಿದೆ. ತನಿಖೆಯ ಸಂದರ್ಭ ತಾನು 13 ವರ್ಷದ ಹಿಂದೆ ಪತಿ ಸಹದೇವ್‌ನನ್ನು ಕೊಂದು ದೇಹವನ್ನು ಶೌಚಾಲಯದ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಅಡಗಿಸಿಟ್ಟಿರುವುದಾಗಿ ಫರೀದಾ ಬಾಯಿ ಬಿಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News