ಬಿಡಬ್ಲ್ಯುಎಫ್ ರ್ಯಾಂಕಿಂಗ್: ನಾಲ್ಕನೇ ಸ್ಥಾನದಲ್ಲಿ ಶ್ರೀಕಾಂತ್

Update: 2017-12-07 18:32 GMT

ಹೊಸದಿಲ್ಲಿ, ಡಿ.7: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಕೆ.ಶ್ರೀಕಾಂತ್ ಗುರುವಾರ ಬಿಡುಗಡೆಯಾಗಿರುವ ಬಿಡಬ್ಲುಎಫ್ ರ್ಯಾಂಕಿಂಗ್‌ನಲ್ಲಿ 4ನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ. ಭಾರತದ ಉದಯೋನ್ಮುಖ ಆಟಗಾರ ಲಕ್ಷ ಸೇನ್ 19 ಸ್ಥಾನ ಭಡ್ತಿ ಪಡೆದು 89ನೇ ಸ್ಥಾನಕ್ಕೇರಿದರು. ಈ ಮೂಲಕ ವಿಶ್ವದ ಅಗ್ರ-100 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

16ರ ಹರೆಯದ ಲಕ್ಷ ಈ ವರ್ಷ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಬಲ್ಗೇರಿಯಾ ಓಪನ್ ಹಾಗೂ ಇಂಡಿಯಾ ಇಂಟರ್‌ನ್ಯಾಶನಲ್ ಸಿರೀಸ್ ಜಯಿಸಿರುವ ಲಕ್ಷ ಅವರು ಕಳೆದ ವಾರ ನಡೆದಿದ್ದ ಟಾಟಾ ಓಪನ್ ಇಂಟರ್‌ನ್ಯಾಶನಲ್ ಚಾಲೆಂಜ್‌ನಲ್ಲಿ ರನ್ನರ್ಸ್-ಅಪ್ ಎನಿಸಿಕೊಂಡಿದ್ದರು. ಗಾಯದ ಸಮಸ್ಯೆ ಎದುರಿಸುತ್ತಿರುವ ಶ್ರೀಕಾಂತ್ ಚೀನಾ ಓಪನ್ ಹಾಗೂ ಹಾಂಕಾಂಗ್ ಓಪನ್‌ನಿಂದ ಹಿಂದೆ ಸರಿದಿದ್ದರು. ಮುಂದಿನ ವಾರ ಆರಂಭವಾಗಲಿರುವ ದುಬೈ ಸೂಪರ್ ಸಿರೀಸ್‌ನಲ್ಲಿ ಆಡಲಿದ್ದಾರೆ. ಎಚ್.ಎಸ್.ಪ್ರಣಯ್ ಹಾಗೂ ಬಿ.ಸಾಯಿ ಪ್ರಣೀತ್ ಕ್ರಮವಾಗಿ 10ನೇ ಹಾಗೂ 17ನೇ ಸ್ಥಾನದಲ್ಲಿದ್ದಾರೆ. ಮಹಿಳೆಯರ ಸಿಂಗಲ್ಸ್ ನಲ್ಲಿ ಪಿ.ವಿ.ಸಿಂಧು ಹಾಗೂ ಸೈನಾ ನೆಹ್ವಾಲ್ ಕ್ರಮವಾಗಿ 3ನೇ ಹಾಗೂ 10ನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಮೂರು ಸ್ಥಾನ ಭಡ್ತಿ ಪಡೆದಿರುವ ಋತುಪರ್ಣ ದಾಸ್ 49ನೇ ಸ್ಥಾನಕ್ಕೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News