ವಿಶ್ವ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಕುಂಭಮೇಳ ಸೇರ್ಪಡೆ

Update: 2017-12-08 15:28 GMT

ಹೊಸದಿಲ್ಲಿ, ಡಿ.8: ಕುಂಭಮೇಳವನ್ನು ವಿಶ್ವ ಸಾಂಸ್ಕೃತಿಕ ಪಟ್ಟಿಗೆ ಸೇರಿಸಲಾಗಿದ್ದು, ಇದನ್ನು ಮನುಕುಲದ ಅಮೂರ್ತ ಸಾಂಸ್ಕೃತಿಕ ಪರಂಪರೆ ಎಂದು ಪರಿಗಣಿಸಿರುವುದಾಗಿ ಯುನೆಸ್ಕೋ ಟ್ವೀಟ್ ಮಾಡಿದೆ.

    ಅಮೂರ್ತ ಸಾಂಸ್ಕೃತಿಕ ಪರಂಪರೆಗಳನ್ನು ಸಂರಕ್ಷಿಸುವ ಉದ್ದೇಶದ ವಿಶ್ವಸಂಸ್ಥೆಯ ಅಂಗಸಂಸ್ಥೆಯಾಗಿರುವ ಯುನೆಸ್ಕೋದ 12ನೆ ಅಧಿವೇಶದ ದಕ್ಷಿಣ ಕೊರಿಯಾದ ಜೆಜುವಿನಲ್ಲಿ ನಡೆದಿದ್ದು ಕುಂಭಮೇಳ ವಿಶ್ವದ ಬೃಹತ್ ಹಾಗೂ ಅತ್ಯಂತ ಶಾಂತಿಯುತ ಧಾರ್ಮಿಕ ಆಚರಣೆ ಎಂದು ಗುರುತಿಸಲಾಗಿದೆ. ಕುಂಭಮೇಳ ಉತ್ಸವ ಅಲಹಾಬಾದ್, ಹರಿದ್ವಾರ, ಉಜ್ಜೈನಿ ಮತ್ತು ನಾಸಿಕ್‌ನಲ್ಲಿ ನಡೆಯುತ್ತಿದ್ದು , ಪವಿತ್ರ ನದಿಗಳನ್ನು ಸ್ವಚ್ಛಗೊಳಿಸುವ ಹಾಗೂ ಹರಕೆ ಸಲ್ಲಿಸುವ ಆಚರಣೆ ಇದಾಗಿದೆ.

 ಇದು ಭಾರತದ ಪಾಲಿಗೆ ಅತ್ಯಂತ ಹೆಮ್ಮೆ ಮತ್ತು ಖುಷಿಯ ವಿಷಯವಾಗಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಯುನೆಸ್ಕೋ ಪಟ್ಟಿಯಲ್ಲಿ ಸೇರ್ಪಡೆಯಾಗುವ ಪರಂಪರೆಗಳ ಆಚರಣೆ ಅಡೆತಡೆಯಿಲ್ಲದೆ ನಿರಂತರವಾಗಿ ಮುಂದುವರಿಯಲು ಅಂತಾರಾಷ್ಟ್ರೀಯ ಮಟ್ಟದ ಸಹಕಾರ ದೊರೆಯುತ್ತದೆ.

 ಬೋಟ್ಸ್‌ವಾನ, ಕೊಲಂಬಿಯಾ, ವೆನೆಜುವೆಲ, ಮಂಗೋಲಿಯ, ಮೊರೊಕ್ಕೊ, ಟರ್ಕಿ ಮತ್ತು ಯುಎಇಯ ಕೆಲವು ಆಚರಣೆಗಳನ್ನು ಈ ಪಟ್ಟಿಗೆ ಸೇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News