ಐಸಿಸ್ ವಿರುದ್ಧದ ಯುದ್ಧ ಮುಕ್ತಾಯ: ಇರಾಕ್ ಪ್ರಧಾನಿ
Update: 2017-12-09 22:08 IST
ಬಗ್ದಾದ್, ಡಿ. 9: ಇಸ್ಲಾಮಿಕ್ ಸ್ಟೇಟ್‌ನ ಅಳಿದುಳಿದ ಪಳೆಯುಳಿಕೆಗಳನ್ನು ಸೈನಿಕರು ಇರಾಕ್‌ನಿಂದ ಹೊರಗಟ್ಟಿದ್ದಾರೆ ಎಂದು ಪ್ರಧಾನಿ ಹೈದರ್ ಅಲ್-ಅಬಾದಿ ಶನಿವಾರ ಹೇಳಿದ್ದಾರೆ.
ಮೂರು ವರ್ಷಗಳ ಹಿಂದೆ ಇಸ್ಲಾಮಿಕ್ ಸ್ಟೇಟ್ ಇರಾಕ್‌ನ ಮೂರನೆ ಒಂದು ಭೂಭಾಗವನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು.
ಸಿರಿಯ ಗಡಿಯುದ್ದಕ್ಕೂ ಇಸ್ಲಾಮಿಕ್ ಸ್ಟೇಟ್ ನಿಯಂತ್ರಣದಲ್ಲಿದ ಕೊನೆಯ ಪ್ರದೇಶಗಳನ್ನು ಇರಾಕ್ ಪಡೆಗಳು ವಶಕ್ಕೆ ಪಡೆದುಕೊಂಡಿವೆ ಎಂದು ಅಬಾದಿಯನ್ನು ಉಲ್ಲೇಖಿಸಿ ಸರಕಾರಿ ಟೆಲಿವಿಶನ್ ಶನಿವಾರ ವರದಿ ಮಾಡಿದೆ.