ಲಂಕಾದ ಹಂಬನ್‌ತೋಟ ಬಂದರು ಚೀನಾಕ್ಕೆ ಹಸ್ತಾಂತರ

Update: 2017-12-09 17:00 GMT

ಕೊಲಂಬೊ, ಡಿ. 9: ದಕ್ಷಿಣ ಶ್ರೀಲಂಕಾದ ಆಯಕಟ್ಟಿನ ಸ್ಥಳದಲ್ಲಿರುವ ಹಂಬನ್‌ತೋಟ ಬಂದರನ್ನು ಶ್ರೀಲಂಕಾ ಶನಿವಾರ 99 ವರ್ಷಗಳ ಲೀಸ್‌ನಲ್ಲಿ ಚೀನಾಕ್ಕೆ ಔಪಚಾರಿಕವಾಗಿ ಹಸ್ತಾಂತರಿಸಿದೆ.

ಹಂಬನ್‌ತೋಟ ಇಂಟರ್‌ನ್ಯಾಶನಲ್ ಪೋರ್ಟ್ ಗ್ರೂಪ್ ಮತ್ತು ಹಂಬನ್‌ತೋಟ ಇಂಟರ್‌ನ್ಯಾಶನಲ್ ಪೋರ್ಟ್ ಸರ್ವಿಸಸ್ ಎಂಬ ಎರಡು ಚೀನಾ ಕಂಪೆನಿಗಳು ಮತ್ತು ಶ್ರೀಲಂಕಾ ಬಂದರು ಪ್ರಾಧಿಕಾರ ಬಂದರು ಮತ್ತು ಅದರ ಸುತ್ತಲಿನ ಹೂಡಿಕೆ ವಲಯದ ಮಾಲೀಕತ್ವವನ್ನು ಸಂಯುಕ್ತವಾಗಿ ಹೊಂದಲಿವೆ ಎಂದು ಅಧಿಕಾರಿಗಳು ತಿಳಿಸಿದರು.

ಈ ವರ್ಗಾವಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಶ್ರೀಲಂಕಾದ ಪ್ರತಿಪಕ್ಷಗಳು ಮತ್ತು ಕಾರ್ಮಿಕ ಸಂಘಟನೆಗಳು, ದೇಶದ ರಾಷ್ಟ್ರೀಯ ಸೊತ್ತುಗಳನ್ನು ಚೀನಾಕ್ಕೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News