ಹ್ಯಾಮಿಲ್ಟನ್‌ಗೆ 4ನೇ ಬಾರಿ ವರ್ಲ್ಡ್ ಚಾಂಪಿಯನ್ ಟ್ರೋಫಿ

Update: 2017-12-09 18:34 GMT

ಲಂಡನ್, ಡಿ.9: ಬ್ರಿಟನ್‌ನ ಲೂವಿಸ್ ಹ್ಯಾಮಿಲ್ಟನ್ ನಾಲ್ಕನೇ ಬಾರಿ ಫಾರ್ಮುಲಾ ಒನ್ ವರ್ಲ್ಡ್ ಚಾಂಪಿಯನ್ ಟ್ರೋಫಿ ಪಡೆದಿದ್ದಾರೆ. ಫ್ರಾನ್ಸ್‌ನ ಹಿಂದಿನ ರಾಜವಂಶದ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ಹ್ಯಾಮಿಲ್ಟನ್ ಅವರಿಗೆ ಟ್ರೋಫಿಯನ್ನು ಹಸ್ತಾಂತರ ಮಾಡಲಾಯಿತು.

ಎಫ್‌ಐಎ ಅಧ್ಯಕ್ಷ ಜಿಯಾನ್ ಟೊಡ್ತ್ ಅವರು 32ರ ಹರೆಯದ ಮರ್ಸಿಡೆಸ್ ಚಾಲಕ ಹ್ಯಾಮಿಲ್ಟನ್‌ಗೆ ಟ್ರೋಫಿಯನ್ನು ನೀಡಿದರು.

ಹ್ಯಾಮಿಲ್ಟನ್ 2017ರಲ್ಲಿ 20 ರೇಸ್‌ಗಳ ಪೈಕಿ 9ರಲ್ಲಿ ಜಯ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News